ಪಂಜದಲ್ಲಿ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್ ಕಸಿದು ಪರಾರಿಯಾದ ಹಾಸನ ಮೂಲದ ಕಳ್ಳರ ಬಂಧನ

0

ಹಾಡಹಗಲೇ ಮನೆಗೆ ನುಗ್ಗಿ ಮನೆಯೊಳಗೆ ಬಂದ ಮಹಿಳೆಯ ಕುತ್ತಿಗೆಯಿಂದ ಚಿನ್ನ ಕದ್ದು ಪರಾರಿಯಾದ ಘಟನೆ ಪಂಜ
ಸಮೀಪದ ಡಬಲ್ ಕಟ್ಟೆ ಯಿಂದ ಮತ್ತು ಅದೇ ದಿನ ಕೂತ್ಕುಂಜದಲ್ಲಿ ಕೂಡ ಮನೆಗೆ ನುಗ್ಗಿದ ಪ್ರಕರಣ ಮಾ.4ರಂದು ನಡೆದಿತ್ತು.

ಈ ಕುರಿತು ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳಿದ್ದು, ಹಾಸನದವರಾಗಿದ್ದು ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಮಾ.29
ರಂದು ಘಟನಾ ಸ್ಥಳಕ್ಕೆ ಕರೆ ತಂದಿದ್ದು ತನಿಖೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.