ಏ : 4 ಮತ್ತು 5 : ಕನಕಮಜಲಿನ ಕುದ್ಕುಳಿ ತರವಾಡು ಮನೆಯಲ್ಲಿ ನೇಮೋತ್ಸವ

0

ಕನಕಮಜಲಿನ ಕುದ್ಕುಳಿ ತರವಾಡು ಮನೆಯಲ್ಲಿ ಧರ್ಮದೈವ, ಶ್ರೀ ವಿಷ್ಣುಮೂರ್ತಿ ಮತ್ತು ಸಪರಿವಾರ ದೈವಗಳ ನೇಮೋತ್ಸವ ಏ.4 ಮತ್ತು 5 ರಂದು ನಡೆಯಲಿದೆ.

ಏ. 4 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಕನಕಮಜಲು ಬಾಳೆಹಿತ್ಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತರುವುದು, ಅನ್ನಸಂತರ್ಪಣೆ ನಂತರ ಕುಲೆ ಜಾವತೆ, ವರ್ಣರ ಪಂಜುರ್ಲಿ, ರಕ್ತೆಶ್ವರಿ ದೈವದ ಹಾಗೂ ಪಿಲಿಭೂತ ದೈವದ ನೇಮೋತ್ಸವ ನಡೆಯಲಿದೆ.

ಏ. 5 ರಂದು ಬೆಳಿಗ್ಗೆ ಶ್ರೀ ಧರ್ಮದೈವದ ನೇಮೋತ್ಸವ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಕುಪ್ಪೆ ಪಂಜುರ್ಲಿ, ಗುಳಿಗ ಹಾಗೂ ಇತರ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.