ಸುಳ್ಯ ಅಂಬಟೆಡ್ಕ ಬಳಿ ಕುಡಿಯುವ ನೀರಿನ ಪೈಪ್ ಹೊಡೆದು ನೀರು ಪೋಲು

0

ಸುಳ್ಯ ಅಂಬಟೆಡ್ಕ ಬಳಿ ಕೆವಿಜಿ ಆಯುರ್ವೇದಿಕ್ ಕಾಲೇಜಿಗೆ ಬರುವ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಪೈಪ್ ಒಡೆದು ಬೃಹತ್ ನೀರು ಪೋಲಾಗುತ್ತಿದೆ.

ಈ ಘಟನೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು ಈ ಬಿರು ಬಿಸಿಲಿಗೆ ಹನಿ ನೀರಿಗೂ ಮಹತ್ವವಿರುವ ಸಂದರ್ಭದಲ್ಲಿ ಈ ರೀತಿಯಾಗಿ ನೀರು ಪೋಲಾಗುತ್ತಿರುವುದು ದುರದೃಷ್ಟಕರ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.