ನಾಳೆ (ಎ.05) : ರಂಗಮನೆಯಲ್ಲಿ ಅಮರಕ್ರಾಂತಿ ಸ್ಮರಣೆ

0

ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟಕ್ಕೆ 187 ವರ್ಷ, ಅಮರಕ್ರಾಂತಿ ಕಾಲ್ನಡಿಗೆ ಜಾಥಾಕ್ಕೆ 26 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಅಂದಿನ ಆ ಅದ್ಭುತ ಕ್ಷಣಗಳನ್ನು ಮೆಲುಕು ಹಾಕುವ ಅಮರಕ್ರಾಂತಿ ಸ್ಮರಣೆ ಆಪ್ತ ಕಾರ್ಯಕ್ರಮ ಎ.05 ರಂದು ಸಂಜೆ 5.45 ಕ್ಕೆ ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಒಂದಷ್ಟು ಮಾತು, ದೇಶಪ್ರೇಮದ ಹಾಡುಗಳು ನಡೆದ ಬಳಿಕ ರಾಜ್ಯ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದು ಅತ್ಯುತ್ತಮ ಸ್ವಾತಂತ್ರ್ಯ ಸಂಗ್ರಾಮ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾದ, ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ, ಡಾ.ಪ್ರಭಾಕರ ಶಿಶಿಲ ರಚಿಸಿದ ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ 1837 ನಾಟಕದ ವೀಡಿಯೋ ಯುಟ್ಯೂಬ್ ನಲ್ಲಿ ಅನಾವರಣ ಹಾಗೂ ಅದರ ವೀಕ್ಷಣೆ ನಡೆಯಲಿದೆ.

ಶ್ರೀಮತಿ ಇಂದಿರಾ ದೇವಿಪ್ರಸಾದ್ ಸಂಪಾಜೆ ಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಎಂ.ಬಿ.ಸದಾಶಿವ, ಡಾ.ಪೂವಪ್ಪ ಕಣಿಯೂರು, ಹರೀಶ್ ಬಂಟ್ವಾಳ, ಡಾ.ವಿದ್ಯಾ ಶಾರದ, ಲತಾ ಮಧುಸೂದನ್,ಕೆ.ಕೃಷ್ಣಮೂರ್ತಿ , ವಿನೋದಿನಿ ಎನ್.ರೈ, ಗಂಗಾಧರ ಮಟ್ಟಿ, ಪಿ.ಬಿ.ಸುಧಾಕರ ರೈ, ಲಕ್ಷ್ಮೀನಾರಾಯಣ ಕಜೆಗದ್ದೆ, ಜಯಪ್ರಕಾಶ್ ಕುಕ್ಕೇಟಿ , ಕುಸುಮಾಧರ ಸಂಕಡ್ಕ, ರವೀಶ್ ಪಡ್ಡಂಬೈಲು, ಮಮತಾ ಸಿ.ಆರ್.ಪಿ., ಕೆ.ಆರ್.ಗೋಪಾಲಕೃಷ್ಣ, ಆರತಿ ಪುರುಷೋತ್ತಮ, ಪ್ರಸನ್ನ ಐವರ್ನಾಡು, ಶ್ರೀಹರಿ ಪೈಂದೋಡಿ, ಮಮತಾ ಕಲ್ಮಕಾರು, ಸುಶ್ಮಿತಾ ಮೋಹನ್, ಅಮೃತ್ ಕುಕ್ಕೇಟಿ ಮೊದಲಾದವರು ಉಪಸ್ಥಿತರಿರುವರು.