ನಾಗತೀರ್ಥ: ದತ್ತಿನಿಧಿ ಪುರಸ್ಕಾರ ವಿತರಣೆ

0

ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಸೀತಾ ಎಸ್ ಅವರು ಕೊಡ ಮಾಡಿರುವ ದತ್ತಿನಿಧಿ ಪುರಸ್ಕಾರ ವಿತರಣೆ ಏ.8ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ನಡೆಯಿತು.

2022- 23 ನೇ ಶೈಕ್ಷಣಿಕ ಸಾಲಿನಲ್ಲಿ 7ನೇ ತರಗತಿಯ ಗಣಿತ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಥಮ ಸ್ಥಾನವನ್ನು ಭಕ್ತಿ ಗೌಡ ಪಂಬೆತ್ತಾಡಿ ಮತ್ತು ದ್ವಿತೀಯ ಸ್ಥಾನವನ್ನು ರಮ್ಯಾ ಕಕ್ಯಾನ ರವರಿಗೆ ನಗದು ರೂಪದಲ್ಲಿ ಶ್ರೀಮತಿ ಸೀತಾ ಎಸ್ ರವರು ವಿತರಿಸಿದರು.