ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆ

0

ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ವತಿಯಿಂದ ಎ.8 ರಂದು ಲೆಕ್ಚರ್ ಹಾಲ್ -1 ರಲ್ಲಿ ವಿಶ್ವ ಆರೋಗ್ಯ ದಿನ ಆಚರಿಸಲಾಯಿತು.

ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಡಾ.ರಾಜ ಸುದರ್ಶನರವರು ಸ್ವಾಗತ ಭಾಷಣವನ್ನು ನೀಡಿದರು.ನಂತರ ಡಾ. ಶ್ರದ್ಧಾ ಪಿ.ಎಸ್, ಸೀನಿಯರ್ ರೆಸಿಡೆಂಟ್ ಇವರು ಆರೋಗ್ಯ ದಿನದ ಮಹತ್ವದ ಬಗ್ಗೆ ಮಾತಾಡಿದರು. ಈ ದಿನವು ಪ್ರತಿ ವರ್ಷ ವಿಶ್ವ ಸಂಸ್ಥೆಯ ವಾರ್ಷಿಕೋತ್ಸವದ ಹಿನ್ನಲೆ ಎ.2ರಂದು ಆಚರಿಸಲಾಗುತ್ತದೆ. 2024 ರ ವಿಷಯ -“ನನ್ನ ಆರೋಗ್ಯ ನನ್ನ ಹಕ್ಕು- ಗುಣಮಟ್ಟದ ಆರೋಗ್ಯ ಸೇವೆಗಳು , ಶಿಕ್ಷಣ ಮತ್ತು ಮಾಹಿತಿ, ಸುರಕ್ಷಿತ ಕುಡಿಯುವ ನೀರು, ಶುದ್ಧ ಗಾಳಿ, ಉತ್ತಮ ಪೋಷಣೆ , ಗುಣಮಟ್ಟದ ವಸತಿ , ಯೋಗ್ಯವಾದ ಕೆಲಸ ಮತ್ತು ಪರಿಸರ ಪರಿಸ್ಥಿತಿಗಳು, ತಾರತಮ್ಯದಿಂದ ಸ್ವಾತಂತ್ರ್ಯ ,ಇದು ಎಲ್ಲರ ಹಕ್ಕು. ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಉಲ್ಫಾಣವಾಗುತ್ತಿರುವ ಆರೋಗ್ಯ ಸಮಸ್ಯೆಗಳ ವಿವರಗಳನ್ನು ಹಂಚಿಕೊಂಡರು.

ಡಾ. ದಿನೇಶ್ ಪಿ.ವಿ., ವಿಭಾಗದ ಮುಖ್ಯಸ್ಥರು, ನಮ್ಮ ಆರೋಗ್ಯ, ನಮ್ಮ ಹಕ್ಕು, ಇದರೆಡೆ ಸಾಗಲು, ಸರ್ಕಾರದಿಂದ ಕೊಡುವ ಸೌಲಭ್ಯಗಳ ಕುರಿತು ವಿಷಯವನ್ನು ಹಂಚಿಕೊಂಡರು. ನಂತರ Indian Association of Preventure and Social Medicine ಇವರ ವತಿಯಿಂದ MBBS ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ಇದ್ದರು.