ಮುಪ್ಪೇರ್ಯ : ಭರತನಾಟ್ಯ ಮತ್ತು ಯಕ್ಷಗಾನ ತರಗತಿ ಉದ್ಘಾಟನೆ

0

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ನೇತೃತ್ವದಲ್ಲಿಶ್ರೀ ಧರ್ಮ ಶಾಸ್ತ್ರ ಸೇವಾ ಟ್ರಸ್ಟ್ (ರಿ ) ಮುಪ್ಪೇರ್ಯ ಇಲ್ಲಿ ಭರತನಾಟ್ಯ ಮತ್ತು ಯಕ್ಷಗಾನ ತರಗತಿ ಶುಭಾರಂಭಗೊಂಡಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಸುಭಾಷ್ ಚಂದ್ರ ರೈ ತೋಟ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಧರ್ಮ ಶಾಸ್ತ ಸೇವಾ ಟ್ರಸ್ಟ್ ಇದರ ಗೌರವಾಧ್ಯಕ್ಷರಾದ ಅಶೋಕ್ ಶೆಟ್ಟಿ ಮತ್ತು ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಯಕ್ಷಗಾನ ಗುರುಗಳಾದ ಲಕ್ಷ್ಮೀಶ ರೈ ಗುರಿಕಾನ ಮತ್ತು ಭರತನಾಟ್ಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು, ಕುಮಾರಿ ವಿಭಾಶ್ರೀ ಗೌಡ ಕಾರ್ಯಕ್ರಮಕ್ಕೆ ಶುಭ ಕೋರಿ ತರಗತಿಯನ್ನು ಆರಂಭಿಸಿದರು. ಕುಮಾರಿ ದಿಶಾ ಇವರಿಂದ ಪ್ರಾರ್ಥನೆ ನೆರವೇರಿ ತು. ಸಿಂಗಾರಿ ಮೇಳದ ಸದಸ್ಯ ರಾಜೇಶ್ ವಂದಿಸಿದರು. ಸಿಂಗಾರಿ ಮೇಳದ ಅಧ್ಯಕ್ಷರಾದ ಲೋಕೇಶ್ ಬೆಳ್ಳಿಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.

ಬಾಳಿಲ , ಬೆಳ್ಳಾರೆ ಕಲ್ಮಡ್ಕ ಮುಂತಾದ ಕಡೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವಲ್ಲಿ ಸಹಕಾರ ನೀಡಿದರು. ಸಿಂಗಾರಿ ಮೇಳದ ಹೆಚ್ಚಿನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.