ಕೊಲ್ಲಮೊಗ್ರ – ಐನೆಕಿದು ಗ್ರಾಮ ಬಿಜೆಪಿ ಕಾರ್ಯಕರ್ತರ ಸಭೆ

0

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

ಕೊಲ್ಲಮೊಗ್ರ – ಐನೆಕಿದು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಬಿರುಸಿನ ಪ್ರಚಾರ ನಡೆಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಸಾದ್ ಕೋಡ್ಯಡ್ಕ ಮತ್ತು ಕಿಶನ್ ಕೋಟೆಲು ಬಿಜೆಪಿಗೆ ಸೇರ್ಪಡೆಗೊಂಡರು.ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ,ಶಾಸಕರಾದ ಭಾಗೀರಥಿ ಮುರುಳ್ಯ,ಮಾಜಿ ಸಚಿವ ಎಸ್.ಅಂಗಾರ,ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ,ಮುಖಂಡರಾದ ಹರೀಶ್ ಕಂಜಿಪಿಲಿ,ಹಿಮ್ಮತ್ ಕೆ.ಸಿ, ಮೊದಲಾದವರು ಉಪಸ್ಥಿತರಿದ್ದರು. ಹರಿಹರ ಪಲ್ಲತಡ್ಕ, ಕಲ್ಮಕಾರು, ಬಾಳುಗೋಡು ಗ್ರಾಮದವರು ಸಭೆಯಲ್ಲಿದ್ದರು.