ಲಯನ್ಸ್ ಕ್ಲಬ್ ಪಂಜ ವತಿಯಿಂದ ಗ್ರಾಮ ಪಂಚಾಯತ್‌ಗೆ ಕಥೆ ಪುಸ್ತಕಗಳು ಮತ್ತು ಕ್ರೀಡಾ ಸಾಮಗ್ರಿಗಳ ಹಸ್ತಾಂತರ

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪಂಜ ಗ್ರಾಮ ಪಂಚಾಯತ್‌ನ ಗ್ರಂಥಾಲಯಕ್ಕೆ ಕಥೆ ಪುಸ್ತಕ ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು. ಪಂಜ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಂತ್ ಯು.ಬಿ ಯವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು , ಉಪಸ್ಥಿತರಿದ್ದು, ಪ್ರಾಸ್ತಾವಿಕ ಮಾತನಾಡಿ ಶುಭ ಹಾರೈಸಿದರು. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಚಿತ್ರಕಲಾ, ಕ್ಲಬ್ ನ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ,ಕೋಶಾಧಿಕಾರಿ ಆನಂದ ಗೌಡ , ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಗಳು ಹಾಗು ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು .