ಕಲ್ಲಪ್ಪಳ್ಳಿ : ಚುನಾವಣಾ ಪ್ರಚಾರ ಸಭೆ

0

ಕಲ್ಲಪ್ಪಳ್ಳಿ, ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ, ಕಾಮ್ರೇಡ್ ಎಂ.ವಿ. ಬಾಲಕೃಷ್ಣ ಮಾಸ್ಟರ್ ಕಲ್ಲಪಳ್ಳಿಯಲ್ಲಿ ಬಹಿರಂಗವಾಗಿ ಮತ ಪ್ರಚಾರ ನಡೆಸಿದರು.

ಮುಖ್ಯ ಭಾಷಣಕಾರರಾಗಿ ಕುಂಬಳೆ ಏರಿಯಾ ಕಮಿಟಿ ಸದಸ್ಯರಾದ ಸಂಗಾತಿ ಶಂಕರ್ ರೈ ಮಾಸ್ತರು ಮಾತನಾಡಿದರು. ಸಂವಿಧಾನದ ಉಳಿವಿಗಾಗಿ, ದೇಶದ ಭದ್ರತೆಗಾಗಿ, ಕೋಮು ಸೌಹಾರ್ದತೆಗಾಗಿ ಎಡರಂಗದ ಅಭ್ಯರ್ಥಿಯನ್ನು ವಿಜಯಗೊಳಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ರಾಜನ್, ಪಾರ್ಟಿ ಜಿಲ್ಲಾ ಕಮಿಟಿ ಸದಸ್ಯರಾದ ಎಂ.ವಿ. ಕೃಷ್ಣನ್, ಏರಿಯ ಕಮಿಟಿ ಸೆಕ್ರೆಟರಿ ಕೆ ಕೃಷ್ಣನ್, ಏರಿಯಾ ಕಮಿಟಿ ಸದಸ್ಯರಾದ ಪಿಜಿ ಮೋಹನ್, ಪಿ ತಂಬಂನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಬೂತ್ ಸೆಕ್ರೆಟರಿ ಅರುಣ್ ರಂಗತ್ತಮಲೆ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕುಮಾರನ್ ಇವರು ವಹಿಸಿದ್ದರು. ಬೂತ್ ಮಟ್ಟದ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.