ಸೋಣಂಗೇರಿಯಲ್ಲಿ ಬಿಜೆಪಿ ಮತಯಾಚನೆ

0

ಸೋಣಂಗೇರಿ ಬೂತ್ ನಲ್ಲಿ ಬಿಜೆಪಿ ಕಾರ್ಯಕರ್ತರು ಎ.21ರಂದು ಜಾಲ್ಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನಾಯಕ್ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು‌.

ಈ ಸಂದರ್ಭದಲ್ಲಿ ಶ್ರೀಮತಿ ಶಶಿಕಲಾ ರೈ ಬೇಲ್ಯ, ಯೋಗೀಶ್ ಸೋಣಂಗೇರಿ, ಜಾಲ್ಸೂರು ಗ್ರಾ.ಪಂ. ಸದಸ್ಯರುಗಳಾದ ಶ್ರೀಮತಿ ಅಂಬಿಕಾ ಕುಕ್ಕಂದೂರು, ಶ್ರೀಮತಿ ದೀಪ ಅಜಕಳಮೂಲೆ, ಈಶ್ವರ ನಾಯ್ಕ ಸೋಣಂಗೇರಿ, ಹರಿಣಾಕ್ಷಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರ ಪರವಾಗಿ ಮತಯಾಚನೆ ಮಾಡಿದರು.