ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ

0

ಶ್ರೀ ಚೆನ್ನಕೇಶವ ದೇವರಿಗೆ ನೂತನ ಬ್ರಹ್ಮರಥ ನಿರ್ಮಾಣಕ್ಕೆ ಪ್ರಾರ್ಥನೆ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವವು ಇಂದು ನಡೆಯಿತು.
ಬೆಳಿಗ್ಗೆ 108 ತೆಂಗಿನಕಾಯಿ ಗಣಪತಿ ಹೋಮ ನಡೆಯಿತು. ನಂತರ ಶ್ರೀ ದೇವರಿಗೆ ಸಮರ್ಪಿಸುವ ನೂತನ ಬ್ರಹ್ಮೃರಥ ನಿರ್ಮಾಣಕ್ಕೆ ಪ್ರಾರ್ಥನೆ ನಡೆಯಿತು.
ಮಧ್ಯಾಹ್ನ ನವಕ, ಪವಮಾನಾಭಿಷೇಕ ನಡೆದು ನಂತರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೋಕ್ತೆಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ, ಜೀರ್ಣೋದ್ದಾರ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ರಾತ್ರಿ ರಂಗಪೂಜೆ ,ಪ್ರಸಾದ ವಿತರಣೆ ನಡೆಯಲಿದೆ.