ಸಂಪಾಜೆ: ಗಾಳಿ ಮಳೆಗೆ ಅಲ್ಲಲ್ಲಿ ಹಾನಿ

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮೇ.3ರಂದು ರಾತ್ರಿ ಸುರಿದ ಗಾಳಿ ಸಹಿತ ಮಳಗೆ ವಿವಿದೆಡೆಗಳಲ್ಲಿ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.

ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಚಟ್ಟೆಕಲ್ಲು ಎಂಬಲ್ಲಿ ಹಸೈನಾರ್ ಎಂಬವರ ರಬ್ಬರ್ ಶೀಟ್ ಶೇಖರಣಾ ಘಟಕಕ್ಕೆ ಮರಬಿದ್ದು, ಹಾನಿಯಾಗಿದೆ.

ದಂಡಕಜೆ ಹಾಗೂ ಚಟ್ಟೆಕಲ್ಲು ಬಳಿ ಮಳೆ ನೀರು ರಸ್ತೆಗೆ ಹರಿದು ಹೂಳು ತುಂಬಿಕೊಂಡ ಘಟನೆಯೂ ನಡೆದಿದೆ. ಅಲ್ಲದೆ ಅಲ್ಲಲ್ಲಿ ವಿಧ್ಯತ್ ಕಂಬಗಳು ಧರೆಶಾಯಿಯಾದ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.