ಶೇ.100 ಫಲಿತಾಂಶ ದಾಖಲಿಸಿದ ಮರ್ಕಂಜ ಸರಕಾರಿ ಪ್ರೌಢಶಾಲೆ

0

ಮರ್ಕಂಜ ಸರಕಾರಿ ಪ್ರೌಢ ಶಾಲೆಯು 2023-24ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಒಟ್ಟು 21 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 12 ಹುಡುಗಿಯರು ಮತ್ತು 9 ಹುಡುಗರು ಪರೀಕ್ಷೆ ಬರೆದಿದ್ದರು.

ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.‌ ರಚನ್ ಬಿ.ಎ. 561, ಹಿತಶ್ರೀ ಜೆ.ವಿ. 540 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.