ಪಂಜಿಗಾರು – ಕೊಡಿಯಾಲ ರಸ್ತೆಯಲ್ಲಿ ಕೆಸರು – ವಾಹನ ಸವಾರರಿಗೆ ಸಂಕಷ್ಟ

0

ಪಂಜಿಗಾರಿನಿಂದ ಕೊಡಿಯಾಲ ಸಂಪರ್ಕಿಸುವ ರಸ್ತೆಯ ಪಂಜಿಗಾರಿನಿಂದ ಸ್ವಲ್ಪ ಮುಂದೆ ತಿರುವಿನಲ್ಲಿ ಇತ್ತೀಚೆಗೆ ಸುರಿದ ಭೀಕರ ಮಳೆಗೆ ಮಣ್ಣು ಬಂದು ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ತೊಂದರೆಯಾಗಿದೆ.


ರಸ್ತೆ ಬದಿಯ ಖಾಸಗಿ ಜಾಗದವರು ಜೆಸಿಬಿ ಮುಖಾಂತರ ನೆಲ ಸಮತಟ್ಟು ಮಾಡಿದ್ದು ಇದರ ಮಣ್ಣು ಮಳೆ ನೀರಿಗೆ ಕೊಚ್ಚಿಕೊಂಡು ಬಂದು ರಸ್ತೆಯಲ್ಲಿ ನಿಂತ ಪರಿಣಾಮ ವಾಹನ ಸವಾರರಿಗೆ ತೊಂದರೆಯಾಗಿರುವುದಾಗಿ ತಿಳಿದು ಬಂದಿದೆ.