ಚೆಂಬು: ಶ್ರೀ ಭಗವಾನ್ ಸಂಘದಿಂದ ಯುವಕನಿಗೆ ಗಾಲಿಕುರ್ಚಿ ಕೊಡುಗೆ

0


ತನ್ನ ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾಕೂಟದಲ್ಲಿ ಗಾಯಗೊಂಡು, ಶಾಶ್ವತವಾಗಿ ಹಾಸಿಗೆಯಲ್ಲೇ ದಿನ ಕಳೆಯಬೇಕಾದ ಅನಿವಾರ್ಯತೆಗೆ ಒಳಗಾದ ಕೊಯನಾಡಿನ ಯುವಕ ಎನ್.ಎನ್.ಚೇತನ್ ಅವರಿಗೆ ಚೆಂಬು ಶ್ರೀ ಭಗವಾನ್ ಸಂಘದಿಂದ ಗಾಲಿಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು.

ಭಗವಾನ್ ಸಂಘದ ಗೌರವಾಧ್ಯಕ್ಷ ಎನ್.ಸಿ. ಅನಂತ ಅವರು ಗಾಲಿಕುರ್ಚಿಯನ್ನು ಹಸ್ತಾಂತರಿಸಿದರು.

ಶ್ರೀ ಭಗವಾನ್ ಸಂಘವು ಸದಾ ತನ್ನ ಸಮಾಜಮುಖಿ ಕಾರ್ಯಗಳಿಂದ ಮತ್ತು ಅಶಕ್ತರಿಗೆ ನೆರವು ನೀಡುವ ಮೂಲಕ ಜನಪ್ರಿಯವಾಗಿದೆ.

ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷ ಶಶಿಧರ ಎಕ್ಕಡ್ಕ ,ಕಾರ್ಯದರ್ಶಿ ಪ್ರಶಾಂತ್ , ಮಾಜಿ ಎ.ಪಿ.
ಎಂ.ಸಿ. ಸದಸ್ಯ. ಕೆ.ಕೆ.ದೇವಪ್ಪ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.