ಅಪ್ಪ ಎಂದರೆ ಆಕಾಶ….

0

ಕು. ನಿರೀಕ್ಷಾ ಸುಲಾಯ

ಎಲ್ಲಾ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಆಕಾಶ
ಜೀವನದ ಸಿಹಿ-ಕಹಿ ದಿನಗಳಲ್ಲಿ ಮೂಡಿಸುತ್ತಾರೆ ಪ್ರಕಾಶ
ಬದುಕಿನುದ್ದಕ್ಕೂ ಎಲ್ಲಾ ಕೆಲಸ-ಕಾರ್ಯಗಳಲ್ಲಿ ಬೆನ್ನೆಲುಬಾಗಿ
ಕಷ್ಟ – ಸುಖಗಳ ದಿನಗಳಲ್ಲಿ ಜೊತೆ ಜೊತೆಯಾಗಿ ಸಾಗಿ

ಪ್ರೀತಿ – ವಾತ್ಸಲ್ಯದಿಂದ ಕೂಡಿದ ಜೀವ
ಮನಸ್ಸಿನಲ್ಲಿದೆ ಕೋಮಲತೆಯ ಭಾವ
ಹೆಜ್ಜೆ ಹೆಜ್ಜೆಯಲ್ಲೂ ನಮ್ಮ ಕೈ ಹಿಡಿದು
ನಮ್ಮ ಸಾಧನೆಗಳ ಹಿಂದೆ ನಡೆದು

ಅಪ್ಪ ಎನ್ನುವ ಪದದಲ್ಲಿದೆ ಅದೇನೋ ಧೈರ್ಯ
ನನ್ನ ಗುರಿಯ ಹಿಂದಿರುವ ಶೌರ್ಯ
ನಡವಳಿಕೆ ಮತ್ತು ನೀತಿ ಶಾಸ್ತ್ರದ ಗುರು
ಒಳ್ಳೆದು – ಕೆಟ್ಟದರ ಹೇಳಿಕೊಡುವ ಧರ್ಮಗುರು

ನಿರ್ಧಾರಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ
ನನಗಾಗಿ ಕನಸು – ಆಸೆಗಳನ್ನು ಬೆಂಬಲಿಸಲು ತ್ಯಾಗ ಮಾಡುತ್ತಾರೆ
ಒತ್ತಡದ ಪರಿಸ್ಥಿತಿಗಳಲ್ಲಿ ನೆನಪಿಸಿಕೊಳ್ಳುವೇ
ಸುಂದರವಾಗಿ ರೂಪಿಸಿದ್ದಾರೆ ನನ್ನ ಭವಿಷ್ಯವನ್ನು

ಕುಟುಂಬಕ್ಕೆ ನೀವೆ ಒಂದು ಆಧಾರ ಸ್ತಂಭ
ಆಸ್ತಿ – ಅಂತಸ್ತುಗಳ ಬಗ್ಗೆ ಇಲ್ಲ ಜಂಭ
ಕನಸುಗಳನ್ನು ನನಸಾಗಿಸಲು ನಿನ್ನ ಪರಿಶ್ರಮ
ಒಳ್ಳೆಯ ನೀತಿಯನ್ನು ಅಳವಡಿಸುತ್ತಾರೆ ನನ್ನು ಜೀವನ ಕ್ರಮದಲ್ಲಿ

ತನ್ನ ಮಗುವಿನ ಜೀವನವನ್ನು ರೂಪಿಸುತ್ತಾರೆ
ಆ ಕಾರ್ಯದಲ್ಲೇ ತನ್ನ ಜೀವನವನ್ನು ಕಳೆಯುತ್ತಾರೆ
ಅಪ್ಪನ ಬಗ್ಗೆ ಮೆಲುಕು ಹಾಕಲು ಸಾಲದು ಒಂದು ದಿನ
ಪ್ರೀತಿ – ಗೌರವದಿಂದ ಕೂಡಿದ ನಿಷ್ಕಲ್ಮಷವಾದ ಮನ

-ನಿರೀಕ್ಷಾ ಸುಲಾಯ
೧೦ ನೇ ತರಗತಿ
ರೋಟರಿ ವಿದ್ಯಾ ಸಂಸ್ಥೆ ಸುಳ್ಯ