ಬೆಳ್ಳಾರೆ: ಸ್ಮಾರ್ಟ್ ಅಂಗನವಾಡಿ ಗೆ ಕೊಡುಗೆ ನೀಡಿದ ದಾನಿಗಳಿಗೆ ಕೃತಜ್ಞತಾ ಸಭೆ

0

ನೆರವು ನೀಡಿದ ದಾನಿಗಳಿಗೆ, ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸುವುದು ಅಭಿನಂದನೀಯ : ಶ್ರೀಮತಿ ರಾಜೀವಿ ಆರ್ ರೈ

ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯ ಮತ್ತು ಅಂಗನವಾಡಿ ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಬೆಳ್ಳಾರೆ ಅಂಗನವಾಡಿ ಕೇಂದ್ರವನ್ನು ಸಂಪೂರ್ಣ ಸೋಲರೀಕರಣದ ಮೂಲಕ ಆಧುನೀಕರಣಗೊಳ್ಳಲು ನೆರವು ನೀಡಿದ ಗ್ರಾಮ ಪಂಚಾಯತ್ ಬೆಳ್ಳಾರೆ, ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿ, ಸಂಘ ಸಂಸ್ಥೆಗಳು, ಊರಿನ ದಾನಿಗಳು, ಪ್ರಾಯೋಜರಿಗೆ, ಪೋಷಕ ಬಂಧುಗಳಿಗೆ ಕೃತಜ್ಞತಾ ಕಾರ್ಯಕ್ರಮವು ಜೂನ್ 21 ರಂದು ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್ ರೈಯವರ ಅಧ್ಯಕ್ಷತೆಯಲ್ಲಿ ಜರುಗಿತು.


ನೆರವು ನೀಡಿದ ದಾನಿಗಳಿಗೆ ಮತ್ತು ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸುವುದು ಬಹು ಮುಖ್ಯ ಎಂದು ಮುಖ್ಯ ಅತಿಥಿಯಾಗಿ ಬಾಗವಹಿಸಿದ ಸುಳ್ಯ ತಾಲೂಕು ಮಹಿಳೆಯರ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈ ಹೇಳಿ ಶುಭ ಹಾರೈಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ್ ರೈಯವರು ಕೃತಜ್ಞತಾ ಭಾಷಣ ಮಾಡಿದರು. ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಬೆಳ್ಳಾರೆ ಜೇಸಿ ಪೂರ್ವಾಧ್ಯಕ್ಷರಾದ ಮಹಮ್ಮದ್ ಆರೀಫ್ ಬೆಳ್ಳಾರೆ, ರೋಟರಿ ಕ್ಲಬ್ ಬೆಳ್ಳಾರೆ ಅಧ್ಯಕ್ಷರಾದ ಶಶಿಧರ್ ಬಿ.ಕೆ, ದಾನಿಗಳಾದ ಶ್ರೀಮತಿ ಸ್ವಾತಿ ಆರ್.ಕೆ ಭಟ್ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೆರವು ನೀಡಿದ ಪ್ರಾಯೋಜಕರನ್ನು ಕೃತಜ್ಞತಾ ಪತ್ರದೊಂದಿಗೆ ಗೌರವಿಸಲಾಯಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ದಿವ್ಯಾ ರಮೇಶ್ ಪಡ್ಪು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿ ಕೆ ವಂದಿಸಿದರು.