ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿದ್ದ ಸಂದ್ಯಾಮಣೆ ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.









ಇವರು ಆಲೆಟ್ಟಿ ಗ್ರಾಮದ ಗುಡ್ಡೆಮನೆ ಆನಂದ ಗೌಡ ಹಾಗೂ ಲಲಿತಾ ರವರ ಪುತ್ರಿ ಯಾಗಿದ್ದಾರೆ. ಇವರು ೨೦೦೩ ರಲ್ಲಿ ನೇರ ನೇಮಕಾತಿಯ ವಾಲಿಬಾಲ್ ಆಟಗಾರ್ತಿಯಾಗಿ ಪೊಲೀಸ್ ಇಲಾಖೆಗೆ ಬಂದರು.
ಬಳಿಕ ಉಡುಪಿ, ಬೆಂಗಳೂರು, ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ಇವರ ಉತ್ತಮ ಸೇವೆಗೆ ೨೦೧೬ ರಲ್ಲಿ ಮುಖ್ಯ ಮಂತ್ರಿ ಪದಕವನ್ನು ಪಡೆದುಕೊಂಡಿದ್ದಾರೆ.










