ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ವತಿಯಿಂದ ಸಂಘದ ಸದಸ್ಯರಾಗಿದ್ದು, ನಿಧನರಾದ ಸದಸ್ಯರ ಮನೆಯವರಿಗೆ ಮರಣ ಸಾಂತ್ವನ ನಿಧಿಯನ್ನು ಜ.31ರಂದು ಹಸ್ತಾಂತರಿಸಲಾಯಿತು.









ಸಹಕಾರಿ ಸಂಘದ ನಿರ್ದೇಶಕರಾಗಿದ್ದು, ಮರಣ ಹೊಂದಿದ ಕುಟ್ಟಿ ಮಹಾಬಲಡ್ಕ, ಗಂಗಾಧರ ನಾಯ್ಕ ಕುಂಬರ್ಚೋಡು, ಕೃಷ್ಣ ಬೆಳ್ಚಪ್ಪಾಡ ಅಂಬಾಡಿಮೂಲೆ ಅಡ್ಕಾರು, ಕೃಷ್ಣ ನಂಬಿಯಾರ್ ಕಾಟೂರು, ಅವ್ವಾಬಿ ಸುಣ್ಣಮೂಲೆ, ಅಸ್ಮಾಬಿ ಸುಣ್ಣಮೂಲೆ, ಶಿವಕುಮಾರ್ ಪೆರ್ನಾಜೆ ಹಾಗೂ ಗಂಗಾಧರ ಗೌಡ ಬೊಮ್ಮೆಟ್ಟಿ ಅವರ ಮನೆಯವರಿಗೆ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಕಾಮತ್ ಅವರು ಮರಣ ಸಾಂತ್ವನ ನಿಧಿಯನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಸಹಕಾರಿ ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ ದೇರ್ಕಜೆ, ನಿರ್ದೇಶಕರುಗಳಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ತಿಲೋತ್ತಮ ಗೌಡ ಕೊಲ್ಲಂತಡ್ಕ, ಸುನಿಲ್ ಅಕ್ಕಿಮಲೆ, ಗಂಗಾಧರ ಗೌಡ ಕಾಳಮನೆ, ಕುಸುಮಾಧರ ಅರ್ಭಡ್ಕ, ನಿರಂಜನ ಬೊಳುಬೈಲು ಉಪಸ್ಥಿತರಿದ್ದರು.











