ಟೀಮ್ ಸುಳ್ಯ ಇನ್ ಬೆಂಗಳೂರು ಮೇ ತಿಂಗಳಲ್ಲಿ ನಡೆಯುವ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆ

0


ಬೆಂಗಳೂರಿನಲ್ಲಿರುವ ಸುಳ್ಯದ ಯುವಕರ ವಾಟ್ಸಪ್ ಗ್ರೂಪ್ ಆದ ಟೀಮ್ ಸುಳ್ಯ ಇನ್ ಬೆಂಗಳೂರು (TSiB) ಇದರ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯು TSiB ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಲ್ಲಿ ಓರ್ವರಾದ ಅಶ್ರಫ್ ಟರ್ಲಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರೋಡ್ ಮುರುಗೇಶ್ ಪಾಳ್ಯದ ಸಲಾಲ
ಹೋಟೆಲ್ ನಲ್ಲಿನಡೆಯಿತು.


ಗ್ರೂಪ್ ಅಡ್ಮಿನ್ ರಶೀದ್ ಚೆಂಗಳ ರವರು ಪ್ರಾಸ್ತವಿಕವಾಗಿ ಮಾತನಾಡಿ ಸಮ್ಮಿಲನ ಕಾರ್ಯಕ್ರಮದ ಉದ್ದೇಶವನ್ನು ಮಂಡಿಸಿದರು .
ಅಡ್ಮಿನ್ ಗಳಾದ ಅಶ್ರಫ್ ಎಲಿಮಲೆ ಮತ್ತು ಸಿದ್ದೀಕ್ ನಾವೂರು ಕಾರ್ಯಕ್ರಮದ ರೂಪ ರೇಖೆಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು.
ಸುಧೀರ್ಘ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮೇ ತಿಂಗಳಲ್ಲಿ ತಂಡದ ಮೀಟ್ ದ ಟೀಂ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವುದೆಂದು ತೀರ್ಮಾನಿಸಲಾಯಿತು.


ಸಮ್ಮಿಲನದ ಭಾಗವಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಿ, ಉಸ್ತುವಾರಿಗಳನ್ನು ನೇಮಿಸಲಾಯಿತು.
ಕಾರ್ಯಕ್ರಮದ ವ್ಯವಸ್ಥಾಪನ ಸಮಿತಿಯ ನಿರ್ದೇಶಕರಾಗಿ
ಅಶ್ರಫ್ ಎಲಿಮಲೆ ಟೆರಿಟೋರಿ ಮ್ಯಾನೇಜರ್ ಸೌತ್ ಇಂಡಿಯಾ ಸಂಬವ್ ಫೌಂಡೇಶನ್.
ರಶೀದ್ ಚೆಂಗಳ ನಿರ್ದೇಶಕರು ತಾಂತ್ರಿಕ ವಿಭಾಗ ಎಂ.ಪಿ.ಸಿ. ಬೆಂಗಳೂರು,
ಇಸಾಕ್ ಸುಳ್ಯ ಹೆಚ್.ಆರ್. ಮ್ಯಾನೇಜರ್ ಪಾರ್ಮೆಡ್ ಲಿಮಿಟೆಡ್ ಬೆಂಗಳೂರು,
ಮುಸ್ತಫ ಟರ್ಲಿಂಗ್ ,
ಅಶ್ರಫ್ ಟರ್ಲಿ ಉದ್ಯಮಿಗಳು,
ಸಿದ್ದೀಕ್ ನಾವೂರು
ಹಾಗೂ ಸದಸ್ಯರಾಗಿ
ಹಬೀಬ್ ಕೆ.ಬಿ. (ಚಾರ್ಟೆಡ್ ಅಕೌಂಟೆಂಟ್) ಫೈನಾನ್ಸ್ ಕಂಟ್ರೋಲರ್ ಫೋಸಿಲ್
ರಹೀಂ ಟರ್ಲಿ, ಫಾರೂಕ್ ಕಾನಕೋಡ್, ಸಲೀಂ ಟರ್ಲಿ,
ಶಾಹಿದ್ ಬೆಳ್ಳಾರೆ, ಇಜಾಝ್ ಗೂನಡ್ಕ, ರಫೀಕ್ ಚೆಂಗಳ , ಜುನೈದ್ ಎಸ್.ಇ, ಜಾಫರ್ ಕೆ.ಎಂ, ಮಜೀದ್ ಕೆ.ಎ. ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇಜಾಝ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ,
ಇಸಾಕ್ ಸುಳ್ಯ ಸ್ವಾಗತಿಸಿದರು ಮುಸ್ತಾಫ ಟರ್ಲಿಂಗ್ ರವರ ಧನ್ಯವಾದ ಸಮರ್ಪಣೆಯೊಂದಿಗೆ ಸಭೆಯು ಮುಕ್ತಾಯವಾಯಿತು.