ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ದೈವಗಳಿಗೆ ಹರಕೆಯ ಅಗೇಲು ಸೇವೆ

0

ಸರತಿಯ ಸಾಲಿನಲ್ಲಿ ನಿಂತು ಅಗೇಲು ಪ್ರಸಾದ ಸ್ವೀಕರಿಸಿದ ದೈವ ಭಕ್ತರು

ಸುಳ್ಯ ಗಾಂಧಿನಗರ ನಾವೂರು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಅಗೇಲು ಸೇವೆಯು ಇಂದು ಜರುಗಿತು. ಅಗೇಲು ಸೇವೆಯ ರಶೀದಿಯನ್ನು ಮಾಡಿಸಿದ ಭಕ್ತರು ಇಂದು ಬೆಳಗ್ಗೆ ಅಗೇಲು ಸೇವೆಯ ಸಾಮಾಗ್ರಿಗಳನ್ನು ತಂದೊಪ್ಪಿಸಿದರು.

ನಂತರ ಶ್ರೀ ದೈವಗಳಿಗೆಮಧ್ಯಾಹ್ನದ ಸಮಯದಲ್ಲಿ ಅಗೇಲು ಬಡಿಸುವಿಕೆಯಾಗಿ ಬಳಿಕ ಅಗೇಲು ಪ್ರಸಾದವನ್ನು ಕ್ರಮ ಪ್ರಕಾರವಾಗಿ ಚೀಟಿ ಮಾಡಿಸಿದ ಭಕ್ತರಿಗೆ ವಿತರಣೆ ಮಾಡಲಾಯಿತು. ಸರತಿಯ ಸಾಲಿನಲ್ಲಿ ನಿಂತು ಭಕ್ತರು ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಪೂಜಾರಿ ಹಾಗೂ ಧರ್ಮದರ್ಶಿ ಮಂಡಳಿಯ ಸದಸ್ಯರು ಮತ್ತು ಸ್ಥಳೀಯ ಸಂಘಟನೆಯ ಯುವಕರು ಸ್ವಯಂ ಸೇವಕರಾಗಿ ಸಹಕರಿಸಿದರು.