ಕನಕಮಜಲು ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ರಸ್ತೆ ಬಂದ್ : ಊರವರ ಸಹಕಾರದಿಂದ ತೆರವು

0

ವಿದ್ಯುತ್ ಕಂಬ ಅಳವಡಿಕೆ, ಲೈನ್ ರಿಪೇರಿ ಕಾಮಗಾರಿ ನಡೆಯುತ್ತಿದೆ : ಮೆಸ್ಕಾಂ

ಕನಕಮಜಲು ಪಂಜಿಗುಂಡಿಯಲ್ಲಿ ಮಾ.12ರಂದು ರಾತ್ರಿ ವಿದ್ಯುತ್ ತಂತಿಯ ಮೇಲೇ ಮರ ಬಿದ್ದು, ರಸ್ತೆ ಬಂದ್ ಆದುದಲ್ಲದೆ, ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ರಾತ್ರಿಯೇ ಮರ ತೆರವು ಕಾರ್ಯ ನಡೆದಿದ್ದರೆ, ಇದೀಗ ವಿದ್ಯುತ್ ಕಂಬ ಅಳವಡಿಕೆ ಹಾಗೂ ಲೈನ್ ರಿಪೇರಿ ಕಾರ್ಯ ನಡೆಯುತ್ತಿದೆ.

ರಸ್ತೆ ಬದಿಯ ದೊಡ್ಡ ಗಾತ್ರದ ಪಾಲೆ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿತ್ತು ಪರಿಣಾಮ 33 ಕೆ.ವಿ. ಲೈನ್ ನ 1 ಕಂಬ ಹಾಗೂ 11 ಕೆ.ವಿ. ವಿದ್ಯುತ್ ನ 2 ಕಂಬ ತುಂಡಾಯಿತು.

ಹೆದ್ದಾರಿ ಬಂದ್ ಆದುದರಿಂದ ರಾತ್ರಿಯೇ ಕನಕಮಜಲು ಪರಿಸರದವರು ಹಾಗೂ ಮೆಸ್ಕಾಂ ನವರು ಸೇರಿ ಮರ ತೆರವು ಕಾರ್ಯ ಮಾಡಿ, ಸಂಚಾರ ಸುಗಮ ಮಾಡಲಾಯಿತು.

ಮಧ್ಯಾಹ್ನದವರೆಗೆ ರಿಪೇರಿ ಕಾರ್ಯ : ಮರ ಲೈನ್ ಮೇಲೆ ಬಿದ್ದ ಪರಿಣಾಮ 33 ಕೆ.ವಿ. ವಿದ್ಯುತ್ ಹಾಗೂ 11 ಕೆ.ವಿ. ವಿದ್ಯುತ್ ನ 2 ಕಂಬ ಮುರಿದಿರುವುದರಿಂದ ಅದನ್ನು ಅಳವಡಿಕೆ ಕಾರ್ಯ ಆಗಬೇಕು. ಮಧ್ಯಾಹ್ನ ದ ವೇಳೆಗೆ ಕೆಲಸ ಇದೆ.‌ ಮಧ್ಯಾಹ್ನ ಬಳಿಕವೇ ವಿದ್ಯುತ್ ಸರಬರಾಜು ಆಗುತ್ತದೆ ಎಂದು ಸುಳ್ಯ‌ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.