ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ( ರಿ) ಪೆರಾಜೆ ಮತ್ತು ಚಿಗುರು ಯುವಕ ಮಂಡಲ (ರಿ) ಪೆರಾಜೆ ಇವುಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಈಜು ತರಬೇತಿ ಶಿಬಿರಕ್ಕೆ ಎ.15 ರಂದು ಚಾಲನೆ ನೀಡಲಾಯಿತು.
ಸುಳ್ಯ ತಾಲೂಕು ಹಾಗು ಪೆರಾಜೆ ಗ್ರಾಮಗಳ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.








ಈ ಸಂದರ್ಭದಲ್ಲಿ ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘದ ಅಧ್ಯಕ್ಷ ಸುರೇಶ್ ಪೆರುಮುಂಡ, ಕಾರ್ಯದರ್ಶಿ ಯುವಾನಂದ, ಹಾಗೂ ಸದಸ್ಯರುಗಳು ಮತ್ತು ಚಿಗುರು ಯುವಕ ಮಂಡಲದ ಅದ್ಯಕ್ಷ ರಮೇಶ್ ಮಜಿಕೋಡಿ, ಯತಿಶ್ಯಾಮ, ಸದಸ್ಯರುಗಳು ಉಪಸ್ಥಿತರಿದ್ದರು.
ನುರಿತ ಈಜು ಪಟುಗಳಿಂದ ತರಬೇತಿ ನೀಡಲಾಗುತ್ತಿದ್ದು, ಕಲಿಕೆಯ ಆಸಕ್ತಿ ಹೊಂದಿರುವ ಮತ್ತಷ್ಟು ಮಂದಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಆಸಕ್ತರು ಸಂಪರ್ಕಿಸಬಹುದು.










