ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಶೀ ಕ್ಯಾಂಪಸ್ ಮಹಿಳಾ ಕಾಲೇಜ್ ಇದರ 2025 – 26ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆರಂಭ ಗೊಂಡಿದ್ದು ಪ್ರಚಾರ ಪತ್ರ ಬಿಡುಗಡೆ ಕಾರ್ಯಕ್ರಮ ಏ 18 ರಂದು ನಡೆಯಿತು.
ಸ್ಥಳೀಯ ಮಸೀದಿಯ ಮುದರ್ರೀಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ಪ್ರಾರ್ಥನೆ ನೆರವೇರಿಸಿ ಪ್ರಚಾರ ಪತ್ರವನ್ನು ಬಿಡುಗಡೆಗೊಳಿಸಿದರು.















ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಜಿ, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಉಸ್ಮಾನ್ ಸಿ ಎಂ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಜಮಾಅತಿನ ಸದಸ್ಯರುಗಳು ಉಪಸ್ಥಿತರಿದ್ದರು.
ಇಲ್ಲಿ ವಿದ್ಯಾರ್ಥಿನಿಯರಿಗೆ ಶರೀಹತ್ ಶಿಕ್ಷಣದೊಂದಿಗೆ ವಾಣಿಜ್ಯ ವಿಭಾಗ ಹಾಗೂ ಕಲಾ ವಿಭಾಗದ ಶಿಕ್ಷಣ ತರಬೇತಿಯನ್ನು ಕೂಡ ನೀಡಲಾಗುತ್ತಿದೆ.










