














ದುಗ್ಗಲಡ್ಕ-ಕೊಡಿಯಾಲಬೈಲ್ ರಸ್ತೆಯ ಒಂದು ಕಡೆ 45 ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣವಾಗುತ್ತಿದ್ದು, ಕಾಮಗಾರಿ ಕಳಪೆಯಾಗುತ್ತಿದೆ ಎಂದು ಊರವರು ದೂರಿಕೊಂಡಿದ್ದಾರೆ.
ಶಾಸಕರ ನಿಧಿಯಿಂದ 45ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಜಲ್ಲಿಯ ಬೆಡ್ ಹಾಕದೆ ಮಣ್ಣಿನ ಮೇಲೆಯೇ ನೇರವಾಗಿ ಕಾಂಕ್ರೀಟ್ ಹಾಕಲಾಗುತ್ತಿದೆ. ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೀಗೆ ಹಾಕಿದರೆ ಲಾರಿ ಮುಂತಾದ ಭಾರಿ ಗಾತ್ರದ ವಾಹನ ಸಂಚರಿಸಿದಾಗ ರಸ್ತೆ ಒಡೆದು ಹೋಗಬಹುದು ಎಂದು ದೂರಿಕೊಂಡಿದ್ದಾರೆ.










