ಉತ್ತಮ ವಿದ್ಯಾಭ್ಯಾಸದೊಂದಿಗೆ ಒಳ್ಳೆಯ ಉದ್ಯೋಗ ಪಡೆಯುವಂತಾಗಬೇಕು – ಎಸ್.ಎನ್.ಮನ್ಮಥ
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ಸದಸ್ಯರ ಮತ್ತು ಗ್ರಾಹಕರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವು ಮೇ.27 ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ,ಪ್ರೋತ್ಸಾಹಧನ ವಿತರಿಸಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘದ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹ ಧನ ವಿತರಣೆ ಮಾಡುತ್ತಿದ್ದೇವೆ.ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ನಡೆಯಬೇಕು.ಒಳ್ಳೆಯ ವಿದ್ಯಾಭ್ಯಾಸದೊಂದಿಗೆ ಉತ್ತಮ ಉದ್ಯೋಗ ಸಿಗುವುದರೊಂದಿಗೆ ವಿದ್ಯಾರ್ಥಿಗಳು ಕಲಿತ ಶಾಲೆಗೆ,ಮನೆತನಕ್ಕೆ ಕೀರ್ತಿ ರತುವಂತಾಗಬೇಕು ಎಂದು ಹೇಳಿ ಶುಭಹಾರೈಸಿದರು.









ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿಯ ವರುಣ ಕೆ.ಪಿ ಕಲ್ಲೇರಿ, ಲಿಖಿತ್ ಶಾಂತಿಮೂಲೆ, ಕೃತಿ ಪರ್ಲಿಕಜೆ,ಪ್ರಜ್ಬಲ್ ಕೋಲ್ಚಾರ್,ಹವ್ಯ ಶ್ರೀ ಕೋಡ್ತೀಲು, ಮನ್ವಿತ ಬದಂತಡ್ಕ,ಅಚಿಂತ್ಯ ಪಾಲೆಪ್ಪಾಡಿ, ಪಿಯುಸಿಯ ಅನಂತಕೃಷ್ಣ ನಾಟಿಕೇರಿ,ರಶ್ಮಿತಾ ಪರ್ಲಿಕಜೆ,ದ್ವಿತಿ ಸಾರಕರೆ,ತನುಶ್ರೀ ಸಾರಕರೆ,ಪ್ರೇಕ್ಷಾ ಮುಂಡ್ರಾಜೆ,ಪೃಥ್ವಿ ನೂಜಾಲುರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹೇಶ್ ಜಬಳೆ,ನಿರ್ದೇಶಕರಾದ ಗೋಪಾಲಕೃಷ್ಣ ಚೆಮ್ನೂರು,ನಟರಾಜ್ ಸಿ.ಕೂಪ್,ಮಧುಕರ, ಚಂದ್ರಶೇಖರ ಎಸ್, ಗೋಪಾಲಕೃಷ್ಣ ಚೆಮ್ನೂರು,ರಾಜೇಂದ್ರ ಪಾತಿಕಲ್ಲು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ಪೋಷಕರು,ಗ್ರಾಮಸ್ಥರು ಉಪಸ್ಥಿತರಿದ್ದರು.










