ಅಪಾಯ ಸಂಭವ : ಜನಪ್ರತಿನಿಧಿಗಳಿಂದ ಪರಿಶೀಲನೆ
ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ತಡೆಗೋಡೆಯೊಂದು ಬಿರುಕು ಬಿಟ್ಟು ಅಪಾಯದಂಚಿನಲ್ಲಿರುವುದಾಗಿ ವರದಿ ಲಭಿಸಿದೆ.

ಸುಣ್ಣಮೂಲೆಯ ಮುಖ್ಯರಸ್ತೆಯಿಂದ ಬಾಳೆಹಿತ್ತಿಲು ವಯನಾಟ್ ಕುಲವನ್ ದ್ಚಾರದ ಪಕ್ಕದಲ್ಲಿರುವ ನಿವಾಸಿ ಬಾತೀಶ ಎಂಬವರು ತಮ್ಮ ಜಾಗಕ್ಕೆ ತಡೆಯಾಗಿ ಕಟ್ಟಲಾದ ಗೋಡೆ ಬಿರುಕು ಬಿಟ್ಟು, ರಸ್ತೆಯ ಬದಿಗೆ ವಾಲಿದೆ.








ಈ ಬಗ್ಗೆ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳಿಗೆ ಮಾಹಿತಿ ಹೋಗಿ, ಮೇ.26ರಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳರು ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

ತಡೆಗೋಡೆ ಬಿರುಕು ಬಿಟ್ಟು, ವಾಲಿದಂತಿದ್ದು ಮಾಲಕರಿಗೆ ಪಂಚಾಯತ್ ನಿಂದ ನೋಟೀಸ್ ನೀಡಲಾಗುವುದು ಎಂದು ಅವರು ಸುದ್ದಿಗೆ ತಿಳಿಸಿದ್ದಾರೆ.










