ಮೂಲತ ನೆಲ್ಲೂರುಕೆಮ್ರಾಜೆಯ ಬೆಟ್ಟದವರಾಗಿದ್ದು ಪ್ರಸ್ತುತ ಮುಳ್ಳೇರಿಯ ಬಳಿ ಕೋಳಿಯಡ್ಕ ಎಂಬಲ್ಲಿ ವಾಸವಾಗಿರುವ ಬೆಟ್ಟ ಉದಯರವರು ಹೃದಯಾಘಾತದಿಂದ ಮೇ 31ರಂದು ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.















ಮೃತರಿಗೆ 57 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ತಾಯಿ ಕುನ್ಯಮ್ಮ, ಪತ್ನಿ ಶಾಂತಕುಮಾರಿ, ಪುತ್ರ ವಿನೋದ್, ಪುತ್ರಿ ತನುಶ್ರೀ ಹಾಗೂ ಸಹೋದರ ಪತ್ರಕರ್ತ ಕೃಷ್ಣ ಬೆಟ್ಟ ಸೇರಿದಂತೆ ನಾಲ್ಕು ಸಹೋದರರು, ಓರ್ವ ಸಹೋದರಿ, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.










