ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘದ ವತಿಯಿಂದ ಇತ್ತೀಚಿಗೆ ನಿವೃತ್ತಿ ಹೊಂದಿದ ಸಂಘದ ಹಿರಿಯ ಸದಸ್ಯರಾದ ಶಶಿಧರ ಬಿ ಯವರನ್ನುಜೂ.1ರಂದು
ಅಭಿನಂದಿಸಲಾಯಿತು.

ಸುದೀರ್ಘ 39 ವರ್ಷಗಳಿಂದ ಸುಳ್ಯದ ಲ್ಯಾಂಪ್ಸ್ ಸೊಸೈಟಿಯ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಶಿಧರ ಬಿ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.















ಈ ಸಂದರ್ಭದಲ್ಲಿ ಸಂಘ ದ ಅಧ್ಯಕ್ಷ ಕಮಲಾಕ್ಷ ಕೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಹರಿಪ್ರಸಾದ್ ಕಾಪುಮಲೆ, ಪದಾಧಿಕಾರಿಗಳಾದ
ಶಿಕ್ಷಕ ವೆಂಕಟ್ರಾಜ್, ವೆಂಕಟ್ರಮಣ ದೋಣಿಮೂಲೆ, ದಿನೇಶ್ ಬಡ್ಡಡ್ಕ, ಪುಂಡರೀಕ ಕಾಪುಮಲೆ, ಗಂಗಾಧರ ಬಡ್ಡಡ್ಕ, ಚಂದ್ರಶೇಖರ ಬಡ್ಡಡ್ಕ, ಸನತ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.










