ಬೆಳ್ಳಾರೆಯ ಸ್ನೇಹಾoಜಲಿ ಕುಣಿತ ಭಜನಾ ತಂಡದ ಎರಡನೇ ತಂಡ ರಂಗಪ್ರವೇಶ ಕಾರ್ಯಕ್ರಮವು ಜೂ. 07ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.
ತಂಡದ ತರಬೇತುದಾರರಾದ ಸದಾನಂದ ಆಚಾರ್ಯ ಕಾಣಿಯೂರು ದೀಪ ಬೆಳಗಿಸಿ ಉದ್ಘಾಟಿಸಿದರು.









ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಭಜನೆಯು ಮಕ್ಕಳ ಮಾನಸಿಕ ನೆಮ್ಮದಿಯ ಜೊತೆಗೆ ಆರೋಗ್ಯವನ್ನೂ ವೃದ್ಧಿಸುತ್ತದೆ ಎಂದು ಶುಭ ಹಾರೈಸಿದರು.

ಸ್ನೇಹಿತರ ಕಲಾ ಸಂಘದ ಪೂರ್ವಾಧ್ಯಕ್ಷ ಸಂಜಯ್ ನೆಟ್ಟಾರು ಪ್ರಾಸ್ತಾವಿಕ ಮಾತಾಡಿದರು.
ಕುಣಿತ ಬಜನಾ ತರಬೇತಿದಾರರಾದ ಸುಶ್ಮಿತಾ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಉಪಾಧ್ಯಕ್ಷ ವಸಂತ ಗೌಡ ಪಡ್ಪು, ಕಾರ್ಯದರ್ಶಿ ಗಣೇಶ ಪಾಟಾಳಿ, ಕುಣಿತ ಭಜನಾ ತಂಡದ ಸಂಚಾಲಕರಾದ ಮಹಾಲಿಂಗ ಪಾಟಾಳಿ ಮತ್ತು ಶ್ರೀನಿವಾಸ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೇತನ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು. ಕುಣಿತ ಭಜನಾ ವಿದ್ಯಾರ್ಥಿಗಳಾದ ಆಶಿಕಾ ಉಮಿಕಳ ಮತ್ತು ಶ್ಲಾಘ್ಯಾ ಗುರಿಕ್ಕನಾ ಪ್ರಾರ್ಥಿಸಿದರು.










