








ಕನ್ನಯ ಕುಟುಂಬದ ಯಜಮಾನ, ಕೊಡಿಯಾಲ ಗ್ರಾಮದ ಕೃಷಿಕ ಆರ್ವಾರ ಪದ್ಮಯ್ಯ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಜೂ.12ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 91 ವರ್ಷ ಪ್ರಾಯವಾಗಿತ್ತು.
ಇತ್ತೀಚೆಗೆ ಕನ್ನಯ ಕುಟುಂಬದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಮೃತರು ಧರ್ಮ ಪತ್ನಿ ಶ್ರೀಮತಿ ಲಕ್ಷ್ಮಿ, ಪುತ್ರರಾದ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಜನಾರ್ದನ ಗೌಡ ಆರ್ವಾರ ,ಕ್ಯಾ.ನಾಗೇಶ್ ಗೌಡ ಆರ್ವಾರ,ಅಶೋಕ್ ಗೌಡ ಆರ್ವಾರ ಸುರೇಶ್ ಗೌಡ ಆರ್ವಾರ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.










