ಕೆ.ಎಸ್.ಆರ್.ಪಿ. ಎ.ಆರ್.ಎಸ್‌. ಐಸೀತಾರಾಮ ಪೂಜಾರಿ ಪಡಿಕ್ಕಿಲಾಯ ನಿವೃತ್ತಿ

0

ಮಂಗಳೂರಿನಲ್ಲಿ ಕೆ.ಎಸ್.ಆರ್.ಪಿ. ಯಲ್ಲಿ ಎ.ಆರ್.ಎಸ್‌. ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಳ್ಪ ಗ್ರಾಮದ ಬೀದಿಗುಡ್ಡೆ ಬಳಿಯ ಸೀತಾರಾಮ ಪೂಜಾರಿ ಪಡಿಕ್ಕಿಲಾಯರವರು ಮೇ. 31ರಂದು ನಿವೃತ್ತಿ ಹೊಂದಿದ್ದಾರೆ.


ಬಳ್ಪ ಗ್ರಾಮದ ಪಡಿಕ್ಕಿಲಾಯ ಪೂವಪ್ಪ ಪೂಜಾರಿ ಮತ್ತು ಸುಂದರಿ ದಂಪತಿಯ ಪುತ್ರರಾಗಿ 1965ರಂದು ಜನಿಸಿದ ಸೀತಾರಾಮ ಪೂಜಾರಿಯವರು ಬಳ್ಪ ಸ.ಹಿ.ಪ್ರಾ. ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ, ಪಂಜ ಜೂನಿಯರ್ ಕಾಲೇಜಿನಲ್ಲಿ ಪ್ರೌಡ ವಿದ್ಯಾಭ್ಯಾಸವನ್ನು ಪಡೆದು 1993ರ ಮೇ. 19ರಂದು ಇಲಾಖೆಗೆ ಕಾನ್ಸ್ ಟೇಬಲ್ ಆಗಿ ಆಯ್ಕೆಯಾದರು. ಬಳಿಕ ಹೆಡ್ ಕಾನ್ಸ್ ಟೇಬಲ್, ಎ.ಆರ್.ಎಸ್.ಐ ಆಗಿ ಪದೊನ್ನತಿ ಪಡೆದಿದ್ದರು.


ಇವರ ಪತ್ನಿ ಶ್ರೀಮತಿ ಉಮಾವತಿ ಮಂಗಳೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇಬ್ಬರು ಪುತ್ರಿಯರಾದ ಕು. ಸೀಮಾ ಮತ್ತು ಕು. ನೀಮಾ ಪದವಿ ವ್ಯಾಸಂಗವನ್ನು ಮಾಡುತ್ತಿದ್ದಾರೆ.