ಅಂಗನವಾಡಿ ಕಾರ್ಯಕರ್ತೆ ವಾರಿಜಾಕ್ಷಿ ಪಿ.ಡಿ. ನಿವೃತ್ತಿ

0


ಮಂಡೆಕೋಲು ಗ್ರಾಮದ ಮೈಲ್ಲೆಟ್ಟಿಪಾರೆ ಅಂಗನವಾಡಿಯಲ್ಲಿ ಸುಮಾರು ೩೦ ವರ್ಷ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ವಾರಿಜಾಕ್ಷಿ ಪಿ.ಡಿ. ಯವರು ಮೇ ೩೦ ರಂದು ನಿವೃತ್ತಿ ಹೊಂದಿದರು.


ಇವರು ಹೈಸ್ಕೂಲ್ ತನಕ ಅಜ್ಜಾವರದಲ್ಲಿ ಪಿಯುಸಿಯನ್ನು ಸುಳ್ಯದಲ್ಲಿ ಮುಗಿಸಿ, ನಂತರ ಅಂಗನವಾಡಿ ಕಾರ್ಯಕರ್ತೆ ಯಾಗಿ ೩೦ ವರ್ಷ ಸೇವೆಗೈದು ಮೇ ೩೦ ರಂದು ಇದೇ ಅಂಗನವಾಡಿಯಲ್ಲಿ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು.


ಮಕ್ಕಳ ಪೋಷಕರು, ಊರವರು, ಅಧಿಕಾರಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರ ಕಾರ್ಯವೈಕರಿ ಬಗ್ಗೆ ಕೊಂಡಾಡಿದರು. ಇವರು ಪತಿ ದಾಮೋದರ ಗೌಡ ಪುತ್ರಿಯರಾದ ಸುಪ್ರಿಯಾ, ಸುಜಯ ಮತ್ತು ಬೆಳಗಾವಿಯಲ್ಲಿ ಅರಣ್ಯಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾ ರೊಂದಿಗೆ ಈಗ ತನ್ನ ಪತಿಯ ಊರಾದ ಮಂಡೆಕೋಲು ಪಾತಿಕಲ್ಲಿನಲ್ಲಿ ವಾಸಿಸುತ್ತಿದ್ದಾರೆ. ಇವರು ಅಜ್ಜಾವರ ಗ್ರಾಮದ ನಾರಾಲು ಪೂವಯ್ಯ ಕಮಲ ದಂಪತಿಗಳ ಪುತ್ರಿ.