ಕರಂಬಿಲ ಶಾಲೆಗೆ ಛತ್ರಿ ಹಾಗೂ ಗುರುತಿನ ಚೀಟಿ ಕೊಡುಗೆ

0

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಂಬಿಲ ಇಲ್ಲಿನ ವಿದ್ಯಾರ್ಥಿಗಳಿಗೆ ಸುಂದರ ಭಾರತ ಟ್ರಸ್ಟ್ ವತಿಯಿಂದ ನೀಡಲ್ಪಟ್ಟ ನೋಟ್ ಪುಸ್ತಕಗಳನ್ನು ಅಬ್ದುಲ್ ಸತ್ತರ್ ಉಳ್ಳಲಾಡಿ ರವರು ಕೊಡುಗೆಯಾಗಿ ನೀಡಿರುವ ಛತ್ತಿಯನ್ನು ಹಾಗೂ ಯತೀಶ್ ನಾಗನ ಕಜೆ ನೀಡಿರುವ ಗುರುತಿನ ಚೀಟಿಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ಕುಕ್ಕಯ ಕೋಡಿ , ದಾನಿಗಳಾದ ಅಬ್ದುಲ್ ಸತ್ತಾರ್ ಉಳ್ಳಲಾಡಿ. ಎಸ್ .ಡಿ .ಎಮ್. ಸಿ ಯ ಉಪಾಧ್ಯಕ್ಷೆ ನಳಿನಿ ಲೆಕ್ಕೆಸಿರಿಮಜಲು ವಿತರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರು, ಎಸ್. ಡಿ. ಎಂ.ಸಿ ಸದಸ್ಯರು , ಪೋಷಕರು ಉಪಸ್ಥಿತರಿದ್ದರು.