ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ 11ನೇ ಯೋಗ ದಿನಾಚರಣೆಯನ್ನು ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು
ಯೋಗ ದಿನಾಚರಣೆಯ ಅಂಗವಾಗಿ ಯೋಗದ ಐತಿಹಾಸಿಕ ಹಿನ್ನಲೆ ಮತ್ತು ಯುವ ಪೀಳಿಗೆಗೆ ಯೋಗದ ಮಹತ್ವವನ್ನು ಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಎಂ. ಶಂಕರನಾರಾಯಣ ಭಟ್ ಇವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ದೈಹಿಕ ಶಿಕ್ಷಕರಾದ ಶ್ರೀ ಕುಶಾಲಪ್ಪ ನವರು ನಡೆಸಿಕೊಟ್ಟರು. ಯೋಗದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು, ಈ ಸ್ಪರ್ಧೆ ಯ ಬಹುಮಾನಗಳ ಪ್ರಾಯೋಜಕತ್ವ ವನ್ನು ಸಂಸ್ಥೆ ಯ ಆಡಳಿತ ಮಂಡಳಿಯ ಕಾರ್ಯಕಾರಿ ನಿರ್ದೇಶಕರಾದ ಯು. ಪಿ ಜಯರಾಮ ಇವರು ವಹಿಸಿದ್ದರು ಕಾರ್ಯಕ್ರಮ ದಲ್ಲಿ ಉಪನ್ಯಾಸಕ, ಅಧ್ಯಾಪಕ ವೃಂದದವರು ಭಾಗವಹಿಸಿದರು.
ಮುಖ್ಯ ಶಿಕ್ಷಕ ಐತ್ತಪ್ಪ. ಎ ಇವರು ಸ್ವಾಗತಿಸಿ ಉಪನ್ಯಾಸಕರಾದ ಚೆನ್ನಬಸಪ್ಪ ನವರು ವಂದಿಸಿದರು.