ಅರಂಬೂರು ಹಿದಾಯತುಲ್ ಇಸ್ಲಾಂ ಮದ್ರಸ ಎಸ್.ಕೆ.ಎಸ್.ಬಿ.ವಿ ಹಾಗೂ ಬದರ್ ಮಸ್ಜಿದ್ ಸಮಿತಿ ಇವುಗಳ ಜಂಟೀ ಆಶ್ರಯದಲ್ಲಿ ಸಮಸ್ತದ 100ನೇ ಸ್ಥಾಪನಾ ದಿನಾಚರಣೆಯನ್ನು ಮದ್ರಸ ವಠಾರದಲ್ಲಿ ಆಚರಿಸಲಾಯಿತು.
ಧ್ವಜಾರೋಹಣವನ್ನು ಜಮಾಅತ್ ಕಾರ್ಯದರ್ಶಿ ಖಲಂದರ್ ಶಾಫಿ ಹಾಗೂ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ನೆರವೇರಿಸಿದರು.















ಸ್ಥಳೀಯ ಜುಮಾ ಮಸೀದಿ ಖತೀಬರು ಸಂದೇಶ ಭಾಷಣವನ್ನು ಮಾಡಿ ಸಮಸ್ತ ಆದರ್ಶ ಶುದ್ಧಿಯೊಂದಿಗೆ ಶತಮಾನ ದತ್ತ ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆಯುತ್ತಿದ್ದು. ಹಲವಾರು ಮಹನೀಯರ ಕೊಡುಗೆ ಮತ್ತು ತ್ಯಾಗದ ಫಲವಾಗಿ ಇಂದು ಬಹಳ ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.

ಈ ಸಂಧರ್ಭದಲ್ಲಿ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲೆ ಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಫಾತಿಮತ್ ಶಿಫಾನ ರವರನ್ನು ಸನ್ಮಾನಿ ಸಲಾಯಿತು.
ಕ್ವಿಜ್ ಕಾರ್ಯಕ್ರಮವನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.ಜಮಾತಿನ ಹಿರಿಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಮಾತ್ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.










