ನಿಂತಿಕಲ್ಲಿನ ಕುಳಾಯಿತೋಡಿ ಬಳಿ ನಿರ್ಮಾಣವಾಗುತ್ತಿರುವ 33 ಕೆ.ವಿ. ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಭಾರತೀಯ ಕಿಸಾನ್ ಸಂಘ, ಎಣ್ಮೂರು ವಲಯದ ವತಿಯಿಂದ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ ಪುತ್ತೂರು ವಿಭಾಗ ಇವರಿಗೆ ಜೂ. 30 ಮನವಿ ಮಾಡಲಾಯಿತು.









ಇದೇ ಸಂದರ್ಭದಲ್ಲಿ ಮೆಸ್ಕಾಂ ಸುಬ್ರಹ್ಮಣ್ಯ ವಿಭಾಗದ ಎ.ಇ. ಅವರೊಂದಿಗೂ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿಕೊಟ್ಟು ಕುಳಾಯಿತ್ತೋಡಿ ವಿದ್ಯತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನೆರವಾಗಬೇಕೆಂದು ಒತ್ತಾಯಿಸಲಾಯಿತು.
ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ಅಧ್ಯಕ್ಷರಾದ ಶ್ರೀನಂದನ.ಕೆಯವರಿಗೆ ಮನವಿಯನ್ನು ಹಸ್ತಾಂತರಿಸಿದ್ದು, ಭಾರತೀಯ ಕಿಸಾನ್ ಸಂಘ ಸುಳ್ಯದ ಅಧ್ಯಕ್ಷರಾದ ಎಂ.ಜಿ.ಪ್ರಭಾಕರ ರೈ, ಸದಸ್ಯರಾದ ನೆಟ್ಟಾರು ಗೋಪಾಲಕೃಷ್ಣ ಭಟ್, ಕರ್ವಂಕಲ್ಲು ಗೋಪಾಲಕೃಷ್ಣ ಭಟ್, ಸೀತಾರಾಮ, ಪಿ.ಆರ್.ಭಟ್, ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ಕಾರ್ಯದರ್ಶಿ ಯತಿರಾಜ ಜೊತೆಗಿದ್ದರು.










