ಐವರ್ನಾಡು : ಆನೆಗಳ ಹಾವಳಿ – ಕೃಷಿ ನಾಶ – ಅಪಾರ ನಷ್ಟ

0

ಐವರ್ನಾಡಿನ ಮುರಳೀಧರ ಕೊಚ್ಚಿ ಹಾಗೂ ಗಣೇಶ್ ಕೊಚ್ಚಿಯವರ ತೋಟಕ್ಕೆ ಆನೆಗಳು ನುಗ್ಗಿ ಕೃಷಿ ನಾಶಮಾಡಿರುವುದಾಗಿ ತಿಳಿದು ಬಂದಿದೆ.
ಜು.4 ರಂದು ರಾತ್ರಿ ತೋಟಕ್ಕೆ ಬಂದ ಆನೆಗಳು ಬಾಳೆ ಗಿಡಗಳು,ಅಡಿಕೆ ಗಿಡಗಳು ಹಾಗೂ ಮತ್ತಿತರ ಗಿಡಗಳನ್ನು ನಾಶಮಾಡಿವೆ.
ಮನೆ ಸಮೀಪದವರೆಗೆ ಬಂದ ಆನೆಗಳು ವಾಪಾಸು ತೋಟದಿಂದಾಗಿ ಕಾಡಿನ ಕಡೆಗೆ ಹೋಗಿವೆ ಎಂದು ತಿಳಿದು ಬಂದಿದೆ.