ಸುಳ್ಯ ಸ.ಮಾ.ಹಿ. ಪ್ರಾ. ಶಾಲೆಯಲ್ಲಿ ಆರ್ ಕೆ ನಾಯರ್ ರವರಿಂದ ಕೊಡೆ ಮತ್ತು ಲೇಖನ ಸಾಮಗ್ರಿ ವಿತರಣೆ

0

ದತ್ತಿನಿಧಿ ದಾನಿಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣೆ

ಗ್ರೀನ್ ಹೀರೋ ಇಂಡಿಯಾ ಎಂದೇ ಪ್ರಸಿದ್ಧರಾಗಿರುವ ಆರ್ ಕೆ ನಾಯರ್ ಸುಮಾರು 14 ವರ್ಷಗಳಿಂದ ಸುಳ್ಯದ ಮಾದರಿ ಶಾಲೆಗೆ ಪ್ರತಿ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬರುತ್ತಿದ್ದು, ಈ ವರ್ಷದಿಂದ ತಮ್ಮ ತಂದೆ ತಾಯಿಗಳ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ ಮಾಡುವುದಾಗಿ ಅವರ ಸಹೋದರ ಪೀತಾಂಬರ ತಿಳಿಸಿದರು.

ದತ್ತಿನಿಧಿ ದಾನಿಗಳಾದ ಕಮಲಾಕ್ಷಿ ಟೀಚರ್, ಕುದ್ಪಾಜೆ ಸೋಮಯ್ಯ ಮಾಸ್ಟರ್, ಎನ್ ಜಯಪ್ರಕಾಶ ರೈ, ಎಂ.ಬಿ ಸದಾಶಿವ, ಗೋಕುಲ್ ದಾಸ್, ಮೀರಾ ಪ್ರೇಮನಾಥ, ದೇರಣ್ಣ ಗೌಡ ಅಡ್ಡಂತಡ್ಕ,ದೇವಕಿ ಟೀಚರ್,ಲೀಲಾವತಿ ಗುಡ್ಡಪ್ಪ ರೈ, ಭವಾನಿ ಟೀಚರ್, ಶ್ರೀಮತಿ ನೀಲಮ್ಮ, ದೇವರಾಜ ಕುದ್ಪಾಜೆ, ದಿನೇಶ್ ಅಂಬೆಕಲ್ಲು ಇವರುಗಳು ಇರಿಸಿದ ದತ್ತಿ ನಿಧಿಯ ಬಡ್ಡಿ ಹಣವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ.ಎಂ.ಸಿ ಅಧ್ಯಕ್ಷ ರವಿರಾಜ್ ವಹಿಸಿದ್ದರು. ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಕಿಶೋರಿ ಶೇಟ್, ಆರ್ ಕೆ ನಾಯರ್ ಅವರ ಸಹೋದರ ಪೀತಾಂಬರ, ಸುಳ್ಯ ಮಾದರಿ ಡೆವಲಪ್ ಮೆಂಟ್ ಸೊಸೈಟಿಯ ಸಂಚಾಲಕ ಆರ್.ಕೆ ಭಟ್, ಹಿರಿಯ ವಿದ್ಯಾರ್ಥಿಗಳು ಹಾಗೂ ದಾನಿಗಳಾದ ಗೋಕುಲ್ ದಾಸ್, ಶ್ರೀಮತಿ ಮೀರಾ ಪ್ರೇಮನಾಥ‌, ಕರುಣಾಕರ, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದತ್ತಿ ನಿಧಿ ಫಲಾನುಭವಿಗಳ ಹೆಸರನ್ನು ಶಿಕ್ಷಕಿ ಶೀಲಾವತಿ ಬಿ ಎ ಓದಿ ಹೇಳಿದರು. ಶಿಕ್ಷಕಿ ಸುನಂದಾ ಸ್ವಾಗತಿಸಿ,ಪ್ರೇಮಾವತಿ ಸಿ ವಂದಿಸಿದರು ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಹೇಮಲತಾ ಎಂ ಎ ಗೀತಾಕುಮಾರಿ, ಮತ್ತು ಕೀರ್ತಿ ಸಹಕರಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದರು.