
ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025-2026 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಮೂಲಕ ರಚಿಸಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಾಗೂ ವಿವಿಧ ಸಂಘ ಗಳ ಉದ್ಘಾಟನೆ ನಡೆಯಿತು. ಶಾಲಾ ಸಂಚಾಲಕರಾದ ರೊ.PP.PHF ಪ್ರಭಾಕರನ್ ನಾಯರ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ರೋಟರಿ ಅಧ್ಯಕ್ಷರಾದ ರೊ.ಡಾ .ರಾಮ್ ಮೋಹನ್ ಸಭಾಧ್ಯಕ್ಷರ ನೆಲೆಯಲ್ಲಿ ಮಾತನ್ನಾಡಿದರು .
















ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿದರು .ಚುನಾವಣಾಧಿಕಾರಿಗಳಾದ ಶ್ರೀಮತಿ ಜಯಶ್ರೀ. ಕೆ ಚುನಾವಣಾ ಸಾಕ್ಷರತ ಸಂಘ ದ ಮಹತ್ವವನ್ನು ತಿಳಿಸಿದರು.ರಾಜ್ಯಪಾಲ ಶ್ರೇಯಸ್ ಬೇರಿಕೆ ,ಶಾಲಾ ನಾಯಕಿ ಅನನ್ಯ ಕೆ.ವಿ, ಉಪನಾಯಕಿ ಅನುಷ್ಕಾ ಕೆ.ಆರ್ ,ಸಭಾಪತಿ ದಿಗಂತ್ ಕಲ್ಲುಗದ್ದೆ, ಶಿಕ್ಷಣ ಮಂತ್ರಿ ಮನುಜ್ಞಾ ಯು.ಬಿ ,ಆಹಾರ ಮಂತ್ರಿ ಗಗನ್ ಬದಿಕಾನ , ಸಾಹಿತ್ಯ ಮತ್ತು ಸಂಸ್ಕೃತಿ ಮಂತ್ರಿ ಭೂಮಿಕಾ ಕೆ.ವಿ, ಕ್ರೀಡಾ ಮಂತ್ರಿ ಸಂಭ್ರಮ್.ಎ , ಗೃಹ ಮಂತ್ರಿ ಸಂಭ್ರಮ್ ಕೆ.ಎಸ್, ನೀರಾವರಿ ಮಂತ್ರಿ ಲೇಖನ್ ಗೌಡ ಎ.ಎಮ್ , ಆರೋಗ್ಯ ಮತ್ತು ಸ್ವಚ್ಛತೆ ಮಂತ್ರಿ ವಂಶಿ.ಬಿ.ಆರ್, ಸಾರಿಗೆ ಮಂತ್ರಿ ಸಾತ್ವಿಕ್ ಕೆ.ಹೆಚ್ ವಿರೋಧ ಪಕ್ಷದ ನಾಯಕ ಗಗನ್.ಪಿ.ಎ, ಉಪನಾಯಕಿ ಸಾನ್ವಿ .ಎ ಪ್ರತಿಜ್ಞಾ ವಿಧಿ ಸ್ವೀಕರಿಸಿ ಉಪಸ್ಥಿತರಿದ್ದರು.ಶ್ರೀಮತಿ ಸಂಜೀವಿ ಪಿ.ಆರ್ ವಂದಿಸಿದರು . ಕು.ಪೂರ್ವಿಕ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಶಿವಾನಿ ಡಿ.ಎ ಮತ್ತು ಶಿಕ್ಷಕಿ ರಮ್ಯಾ.ಅಡ್ಕಾರು ನಿರೂಪಿಸಿದರು.










