ಸೋಲು ಗೆಲುವು ಸಾಮಾನ್ಯ, ಪ್ರಯತ್ನ ಅಗತ್ಯ : ಮೌರ್ಯ ಆರ್ . ಕುರುಂಜಿ
ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಜು. 12 ರಂದು ಕ್ರೀಡಾ ಕ್ಲಬ್ ಉದ್ಘಾಟನೆಗೊಂಡಿತು.
















ಕೆವಿಜಿ ಡೆಂಟಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್ ಕುರುಂಜಿ ಉದ್ಘಾಟಿಸಿ ಮಾತನಾಡಿ ಆಟದಲ್ಲಿ ಸೋಲು ಗೆಲುವು ಇರುವಂತದ್ದು. ಆದರೂ ಪ್ರತಿಯೊಬ್ಬರೂ ಪ್ರತಿಯೊಂದು ಚಟುವಟಿಕೆಯಲ್ಲಿ ಭಾಗವಹಿಸುವುದು ಅತಿ ಅಗತ್ಯ ಎಂದರಲ್ಲದೆ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ದೈಹಿಕ ಶಿಕ್ಷಕರಾದ ಪ್ರಶಾಂತ್ ಮತ್ತು ರಾಜೇಶ್ ರವರ ಜೊತೆ ಟೇಬಲ್ ಟೆನ್ನಿಸ್ ಆಟವನ್ನು ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ದೈಹಿಕ ಶಿಕ್ಷಕಿ ಶ್ರೀಮತಿ ಆಶಾ ಜ್ಯೋತಿ ಸಹಕರಿಸಿದರು.
ಬಳಿಕ ಒಲಿಂಪಿಯಡ್ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಕೊಟ್ಟು ಗೌರವಿಸಲಾಯಿತು. ಕಾರ್ಯಕ್ರಮವನ್ನು 10ನೇ ತರಗತಿಯ ಚಾರ್ವಿ ಎಚ್.ಎಚ್ ಮತ್ತು ಶಿವಾನಿ ಆರ್ ನಿರೂಪಿಸಿ ಸಂಜನಾ ಎಂ ವಂದಿಸಿದಳು.
ಶಾಲಾ ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಮತ್ತು ಶಿಕ್ಷಕ ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










