
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ,ಕನ್ನಡ ವೈದ್ಯ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ,
ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ
ಸಂಯುಕ್ತ ಆಶ್ರಯದಲ್ಲಿ ಜೂನಿಯರ್ ಕಾಲೇಜು ಪ್ರೌಢ ಶಾಲಾ ವಿದ್ಯಾರ್ಥಿನಿ ಗಳಿಗೆ ದತ್ತಿ ಉಪನ್ಯಾಸ ಮತ್ತು ಉಚಿತ ರಕ್ತ ಪರೀಕ್ಷೆ ಕಾರ್ಯಕ್ರಮ ಜು. 12 ರಂದು ನಡೆಯಿತು.
ಮಕ್ಕಳ ತಜ್ಞರಾದ ಡಾ. ಸುಲೇಖಾ ವರದರಾಜ್ ರವರು ವಿದ್ಯಾರ್ಥಿನಿಯರಿಗೆ ಉಪನ್ಯಾಸ ನೀಡಿ ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಮಕ್ಕಳಲ್ಲಿ ಬರುವ ಕೆಲವು ಮುಖ್ಯವಾದ ಸವಾಲುಗಳು ಮತ್ತು ಈ ಸಂಧರ್ಭದಲ್ಲಿ ಮಕ್ಕಳಲ್ಲಿ ಬೇಕಾದ ಧೈರ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ನೀಡಿದರು.
ಶ್ರೀಮತಿ ಸುಶೀಲಾ ಹಾಗೂ ದಾನಿಗಳಾದ ವಾಸುದೇವ ರಾವ್ ರವರ ಹೆಸರಿನಲ್ಲಿ ಕಾರ್ಯಕ್ರಮ ನಡೆಯಿತು.
ದತ್ತಿ ದಾನಿಗಳಾಗಿ ಡಾ. ದೀಪಕ್ ಹಳದಿಪುರ್
ಟ್ರಸ್ಟ್ ವೆಲ್ ಹಾಸ್ಪಿಟಲ್ ಬೆಂಗಳೂರು ಇವರು ಸಹಕರಿಸಿದರು.









ಭಾರತೀಯ ವೈದ್ಯಕೀಯ ಸಂಘ ಸುಳ್ಯ ಇವರ ನೇತೃತ್ವ ದಲ್ಲಿ ಸುಳ್ಯ ಎಸ್ ಬಿ ಲ್ಯಾಬ್ ಹಾಗೂ ಡಾ. ಸವಿತಾ ಯು ಕೆ ಹಾಗೂ ಡಾ. ರಜನಿ ಬುಟ್ಟೋ ಇವರ ಸಹಕಾರ ದಿಂದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಉಚಿತ ರಕ್ತ ಪರೀಕ್ಷೆ ನಡೆಯಿತು.
ವೇದಿಕೆಯಲ್ಲಿ ಡಾ.ವೀಣಾ ಎನ್.ಅಧ್ಯಕ್ಷರು ಭಾ ವೈ ಸಂ ಸುಳ್ಯ ಶಾಖೆ,ಡಾ. ರವಿಕಾಂತ್ ಗೌರವ ಕಾರ್ಯದರ್ಶಿಗಳು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಮಂಜುಳಾ ಬಡಿಗೇರ್ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕಕಿ ಪೂರ್ಣಿಮಾ ಸ್ವಾಗತಿಸಿ ಶಿಕ್ಷಕಿಯರುಗಳಾದ ಮಮತಾ ಎಂ ಜೆ ಕಾರ್ಯಕ್ರಮ ನಿರೂಪಿಸಿ ಚಂದ್ರಮತಿ ವಂದಿಸಿದರು.










