ಬೀದಿಗುಡ್ಡೆ ಸಂಪೂರ್ಣ ಕ್ಲಿನಿಕ್ ಶುಭಾರಂಭ

0

ಕಡಬದ ಸಂಪೂರ್ಣ ಪಾಲಿ ಕ್ಲಿನಿಕ್ ನಲ್ಲಿ ವೈದ್ಯೆಯಾಗಿರುವ ಡಾ. ಗ್ರೀಷ್ಮಾ ಆರ್ನೋಜಿಯವರ ಸಂಪೂರ್ಣ ಕ್ಲಿನಿಕ್ ಬೀದಿಗುಡ್ಡೆಯಲ್ಲಿ ಜು. 13ರಂದು ಶುಭಾರಂಭಗೊಂಡಿತು.
ಹಿರಿಯ ಪ್ರಗತಿಪರ ಕೃಷಿಕ, ಸಂಪ್ಯಾಡಿ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ಅರ್ಗುಡಿ ವಿಶ್ವನಾಥ ರೈ ಕ್ಲಿನಿಕ್ ಉದ್ಘಾಟಿಸಿದರು.


ಕಟ್ಟಡದ ಮಾಲಕರಾದ ಕುಶಾಲಪ್ಪ ಗೌಡ ಪಂಡಿ, ಹಿರಿಯರಾದ ಪೂವಪ್ಪ ಗೌಡ ಆರ್ನೋಜಿ, ಡಾ. ಗ್ರೀಷ್ಮಾ ಆರ್ನೋಜಿಯವರ ತಾಯಿ ಶ್ರೀಮತಿ ಸುಶೀಲಾ ಆರ್ನೋಜಿ, ಪತಿ ರೋಶಿನ್, ಮಾವ ರವೀಂದ್ರ, ನಿವೃತ್ತ ಶಿಕ್ಷಕಿ ಶ್ರೀಮತಿ ಕುಸುಮಾವತಿ, ಕೊರಗಪ್ಪ ದೊಡ್ಡಮನೆ, ಚಂದ್ರಶೇಖರ ಕಟ್ಟ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.