ಜಟಿಪಳ್ಳ ಮದ್ರಸದ ಮಾಜಿ ಅಧ್ಯಕ್ಷ ಅಬ್ದುಲ್ಲ ಕೆ.ಎಂ.ರವರ ಅನುಷ್ಮರಣಾ ತಹಲೀಲ್ ಕಾರ್ಯಕ್ರಮ

0

ಓರ್ವ ಪರೋಪಕಾರಿ ವ್ಯಕ್ತಿಯನ್ನು ನಮ್ಮ ಊರು ಕಳೆದುಕೊಂಡಿದೆ: ದಿ. ಅಬ್ದುಲ್ಲಾರವರ ಬಗ್ಗೆ ಗಣ್ಯರ ನುಡಿನಮನ

ಸುಳ್ಯ ಜಟ್ಟಿಪಳ್ಳ ನಿವಾಸಿ ಜಟ್ಟಿಪಳ್ಳ ಮಸೀದಿಯಲ್ಲಿ ಏಳು ವರ್ಷಗಳ ಕಾಲ ಅಧ್ಯಕ್ಷರಾಗಿ ಹಾಗೂ ಜಟ್ಟಿಪಳ್ಳ ಶಾಲಾ ಅಭಿವೃದ್ಧಿ ಸಮಿತಿಯಲ್ಲು ಅಧ್ಯಕ್ಷರಾಗಿ ತನ್ನ ಸೇವೆಯನ್ನು ಮಾಡಿದ ದಿ| ಅಬ್ದುಲ್ಲಾ ಕೆ ಎಂ ರವರ ಅನುಷ್ಮರಣೆ ಹಾಗೂ ತಹಲೀಲ್ ಸಮರ್ಪಣೆ ಕಾರ್ಯಕ್ರಮ ಜು.17 ರಂದು ಜಟ್ಟಿಪಳ್ಳ ಮಸೀದಿ ಯಲ್ಲಿ ಹಯಾತುಲ್ ಇಸ್ಲಾಂ ಕಮಿಟಿ ಮತ್ತು ಅಬ್ದುಲ್ಲಾ ರವರ ಕುಟುಂಬ ವತಿಯಿಂದ ನಡೆಯಿತು.

ಸಯ್ಯಿದ್ ಕುಂಞಿ ಕೋಯ ತಂಙಳ್ ನಾವೂರು ರವರು ಕಾರ್ಯಕ್ರಮದ ನೇತೃತ್ವ ವಹಿಸಿ ದುವಾ ಮಜ್ಲಿಸ್ ನಡೆಸಿ ಅನುಷ್ಮರಣಾ ನುಡಿಗಳನ್ನಾಡಿದರು.
ಜಟ್ಟಿಪಳ್ಳ ಮಸೀದಿಯ ಇಮಾಮರಾದ ಲತೀಫ್ ಸಖಾಫಿ, ಸಹ ಅಧ್ಯಾಪಕರಾದ ಸಿರಾಜ್ ಸಹದಿ ತಹಲೀಲ್ ಮತ್ತು ಸ್ವಲಾತ್ ನೇತೃತ್ವ ವಹಿಸಿದರು.

ಈ ಸಂಧರ್ಭ ದಲ್ಲಿ ದಿವಂಗತರ ಕುಟುಂಬದ ಸದಸ್ಯರು ಹಾಗೂ ಜಟ್ಟಿಪಳ್ಳ ನಿವಾಸಿ ಮುಖಂಡರುಗಳು ಮಾತನಾಡಿ ‘ಅಬ್ದುಲ್ಲಾ ಕೆ ಎಂ ರವರ ಜೀವನ ಮತ್ತು ಅವರ ಸಮಾಜ ಸೇವೆ, ಹಾಗೂ ಊರಿನ ಶಾಲೆ ಮತ್ತು ಮದ್ರಸದಲ್ಲಿ ಅವರು ದುಡಿದ ಕ್ಷಣಗಳನ್ನು ನೆನಪಿಸಿ ಕ್ಕೊಂಡರು.
ಜಾತಿ ಮತ ಪಂಗಡ ನೋಡದೆ ಎಲ್ಲಾರನ್ನು ಸಮಾನರಾಗಿ ಕಾಣುವ ಅವರ ಗುಣಗಳು ಮತ್ತು ಪರಿಸರದ ಬಡ ರೋಗಿಗಳ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಅವರ ಹತ್ತಾರು ಸೇವೆಗಳನ್ನು ಗಣ್ಯರು ತಮ್ಮ ಮಾತಿನಲ್ಲಿ ಅನುಸ್ಮರಿಸಿಕ್ಕೊಂಡರು.

ಅವರ ಕೊನೆಯ ದಿನಗಳಲ್ಲಿ ಅವರು ಕಾಸರಗೋಡು ಜಿಲ್ಲೆಯ ಪಳ್ಳಂಗೋಡು ನಲ್ಲಿ ಕಳೆದ ಸಂಧರ್ಭ ದಲ್ಲೂ ಅಲ್ಲೂ ಕೂಡ ತಮ್ಮ ಸಮಾಜ ಸೇವೆ ಮೂಲಕ ಜನರ ಪ್ರೀತಿ ಸಂಪಾದನೆ ಮಾಡಿ ಕ್ಕೊಂಡ ಬಗ್ಗೆ ಅವರ ಸಹಪಾಠಿಯಾದ ಅಬ್ದುಲ್‌ ರಜಾಕ್ ಸಖಾಫಿ ಉಸ್ತಾದ್ ರವರು ತಮ್ಮ ಅನುಸ್ಮರಣ ಭಾಷಣ ದಲ್ಲಿ ಅವರನ್ನು ನೆನಪಿಸಿ ಕೊಂಡರು.
ಅವರ ಕುಟುಂಬದ ಪರವಾಗಿ ಜಟ್ಟಿಪಳ್ಳ ಮಸೀದಿ ಪ್ರಧಾನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ, ಗೌರವಧ್ಯಕ್ಷ ಅಬೂಭಕ್ಕರ್ ಕೆಎ,ಕಬೀರ್ ಜಟ್ಟಿಪಳ್ಳ,ಎ ಬಿ ಮೊಯ್ದೀನ್ ಕಳಂಜ ಅನುಸ್ಮರಣೆ ಮಾಡಿದರು.


ಹಯಾತುಲ್ ಕಮಿಟಿ ಮಾಜಿ ಅಧ್ಯಕ್ಷ ರಶೀದ್ ಜಟ್ಟಿಪಳ್ಳ ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ,ಅನ್ಸಾರಿಯಾ ಅಧ್ಯಕ್ಷ ಅಬ್ದುಲ್‌ ಮಜೀದ್ ಜನತಾ, ಸಿದ್ದೀಕ್ ಅಜ್ಜಾವರ,ಇಬ್ರಾಹಿಂ ಅಜ್ಜಾವರ,ಬಶೀರ್ ಪಳ್ಳಂಗೋಡು, ಅಬ್ದುಲ್‌ ಖಾದರ್ ಝುಹರಿ ಪಳ್ಳಂಗೋಡು, ಸಂಶು ಪಳ್ಳಂಗೋಡು, ಅಬ್ದುಲ್ಲಾ ಅವರ ಜೀವನದ ಬಗ್ಗೆ ಅನುಸ್ಮರಿಸಿದರು.


ಈ ಸಂಧರ್ಭದಲ್ಲಿ ಹಯಾತುಲ್ ಇಸ್ಲಾಂ ಕಮಿಟಿ ಮಾಜಿ‌ ಅಧ್ಯಕ್ಷರಾದ ಎನ್ ಎ ಅಬ್ದುಲ್ಲಾ, ಮಹಮ್ಮದ್ ಹಾಜಿ ಬೊಳಿಯ ಮಜಲು,ಬಶೀರ್ ಬಾಳಮಕ್ಕಿ,ಹಾಜಿ ಅಬೂಭಕ್ಕರ್ ವಿ ಕೆ,ಬಶೀರ್ ಕ್ವಾಲಿಟಿ ಹಾಗೂ ಉಬೈದ್ ಸಹದಿ ಜಾಲ್ಸೂರು, ಮೊದಲಾದವರು ಉಪಸ್ಥಿತರಿದ್ದರು.
ಹಯಾತುಲ್ ಇಸ್ಲಾಂ ಕಮಿಟಿ ನಿರ್ದೇಶಕ ತಾಜುದ್ದೀನ್ ಎಂ ಎಸ್,ಇಮ್ರಾನ್ ಮೊದಲಾದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.