ಅಲೆಟ್ಟಿ ಸದಾಶಿವ ದೇವಳದಲ್ಲಿ ವರಮಹಾಲಕ್ಷ್ಮಿ ಪೂಜೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪೂರ್ವಭಾವಿ ಸಭೆ

0

ಅಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮುಂದಿನ ತಿಂಗಳು ನಡೆಯುವ ಶ್ರೀ ವರ ಮಹಾಲಕ್ಷ್ಮೀಪೂಜೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪೂರ್ವ ತಯಾರಿಯ ಕುರಿತು ಸಭೆಯು ಜು. 24 ರಂದು ದೇವಳದ ಸಭಾಭವನದಲ್ಲಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ ಅಧ್ಯಕ್ಷತೆ ವಹಿಸಿದ್ದರು.

ನಾಗರಪಂಚಮಿ ಮತ್ತು ಶ್ರೀ ವರಮಹಾಲಕ್ಷ್ಮಿಪೂಜೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ವಿಚಾರ ಪ್ರಸ್ತಾಪಿಸಲಾಯಿತು.


ಆಮಂತ್ರಣ ಪತ್ರ ಮುದ್ರಿಸುವ ಬಗ್ಗೆ ತೀರ್ಮಾನಿಸಲಾಯ್ತು. ವರಮಹಾಲಕ್ಷ್ಮಿಮತ್ತು ಸತ್ಯನಾರಾಯಣ ಪೂಜಾ ರಶೀದಿಯನ್ನು ಮನೆ ಮನೆಗೆ ತಲುಪಿಸುವ ಬಗ್ಗೆ ನಿರ್ಧರಿಸಲಾಯಿತು.


ಉಳ್ಳಾಕುಲು ಚಾವಡಿಗೆ ಶಾಶ್ವತ ಚಪ್ಪರ ನಿರ್ಮಿಸುವುದಾಗಿ ಚರ್ಚಿಸಲಾಯ್ತು.
ಈ ಬಗ್ಗೆ ಜ್ಯೋತಿಷ್ಯ ರೊಂದಿಗೆ ಚಿಂತನೆ ನಡೆಸಿ ಕಾರ್ಯ ಕ್ಯೆಗೆತ್ತಿಕೊಳ್ಳುವು ದಾಗಿ ತೀರ್ಮಾನಿಸಲಾಯ್ತು.

ವ್ಯವಸ್ಥಾಪನಾ ಸಮಿತಿಯ ಅವಧಿ ಮುಕ್ತಯವಾಗಿದ್ದು ಆಡಳಿತಾಧಿಕಾರಿಯವರಿಗೆ ಅಧಿಕಾರ ವಹಿಸಲು ಸೂಚನೆ ಬಂದಿದ್ದು ಮುಂದಿನ ವಾರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.
ತೀರ್ಥ ಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯ ಕೊನೆಯ ಸಭೆಯಲ್ಲಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅನುವಂಶಿಕ ಮೋಕ್ತೆಸರ ಶ್ರೀಪತಿ ಬೈಪಾಡಿತ್ತಾಯ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಲ್ಚಾರ್,ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಅಲೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಸನ್ನ ಕೆ ಸಿ ಬಡ್ಡಡ್ಕ, ಸಮಿತಿ ಸದಸ್ಯರಾದ ಹರಿಪ್ರಸಾದ್ ಕಾಪುಮಲೆ, ಅಚ್ಚುತ ಮಣಿಯಾಣಿ ಅಲೆಟ್ಟಿ, ಸತೀಶ್ ಕುಂಭಕೋಡು, ಹರಿಪ್ರಸಾದ್ ಗಬ್ಬಲ್ಕಜೆ, ನಳಿನಿ ರೈ ಅಲೆಟ್ಟಿ, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಅಲೆಟ್ಟಿ, ಕೋಶಾಧಿಕಾರಿ ಸುಂದರ ಅಲೆಟ್ಟಿ, ಲಕ್ಷ್ಮಣ ಗೌಡ ಪರಿವಾರ, ಪವಿತ್ರನ್ ಗುಂಡ್ಯ, ನಾರಾಯಣ ರೈ ಅಲೆಟ್ಟಿ ಉಪಸ್ಥಿತರಿದ್ದರು.


ಶಿವಪ್ರಸಾದ್ ಅಲೆಟ್ಟಿ ಸ್ವಾಗತಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಅಲೆಟ್ಟಿ ವಂದಿಸಿದರು.