ಸುಳ್ಯಕಸಬಾ ಗ್ರಾಮದ ಕೇರ್ಪಳ ನಿವಾಸಿ ಸುಂದರ ನಾಯ್ಕರು ಜು.29ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು.















ಸುಂದರ ನಾಯ್ಕರು ಎರಡು ವಾರದ ಹಿಂದೆ ಮಂಗಳೂರಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಅಲ್ಲಿ ಜಾತಿ ಬಿದ್ದಿದ್ದರು. ಪರಿಣಾಮ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು.29ರಂದು ಸಂಜೆ ಅವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪುತ್ರರಾದ ಆನಂದ ಕೆ.ಎಸ್., ಪುತ್ರಿಯರಾದ ಭಾಗೀರಥಿ, ಆಶಾಲತಾ, ಗೀತಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.










