ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇನ್ ಸ್ಪೆಕ್ಟರ್ ನಟರಾಜನ್ ಡಿ.ಆರ್. ದರ್ಖಾಸ್ತುರವರು ಜು.೩೧ ರಂದು ಸೇವಾ ನಿವೃತ್ತಿ ಹೊಂದಿದರು.
.
ಸುದೀರ್ಘ ೩೩ ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿ ನಿವೃತ್ತರಾಗಲಿದ್ದಾರೆ.
೧೯೯೩ ರಲ್ಲಿ ಡಿ.ಸಿ.ಸಿ ಬ್ಯಾಂಕಿನ ಮಂಗಳೂರು ಜನತಾ ಬಜಾರ್ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ ಇವರು ಬಳಿಕ ಪುತ್ತೂರು ಡಿ.ಸಿ.ಸಿ.ಬ್ಯಾಂಕಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿದರು.









ನಂತರ ಸುಳ್ಯ ಬ್ಯಾಂಕಿಗೆ ವರ್ಗಾವಣೆಗೊಂಡ ಇವರು ಅಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿ ವಲಯ ಮೇಲ್ವಿಚಾರಕರಾಗಿ ಭಡ್ತಿ ಹೊಂದಿ ಪುತ್ತೂರು ವಲಯಕ್ಕೆ ವರ್ಗಾವಣೆಗೊಂಡರು.
ನಂತರ ಜೂನಿಯರ್ ಮೆನೇಜರ್ ಆಗಿ ಮಂಗಳೂರು ಕೇಂದ್ರ ಕಚೇರಿ ಸಾಲ ವಿಭಾಗಕ್ಕೆ ವರ್ಗಾ ವಣೆಗೊಂಡರು.
ಅಲ್ಲಿಂದ ಜಾಲ್ಸೂರು ಡಿ.ಸಿ.ಸಿ.ಬ್ಯಾಂಕಿಗೆ ಸೀನಿಯರ್ ಮೆನೇಜರ್ ಆಗಿ ಬಂದು ಕರ್ತವ್ಯ ನಿರ್ವಹಿಸಿದರು.
ಬಳಿಕ ಬೆಳ್ಳಾರೆ ಶಾಖೆಯಲ್ಲಿ ಸೇವೆ ಸಲ್ಲಿಸಿ ನಂತರ ಬ್ಯಾಂಕ್ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿ ೪ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಇವರ ಪತ್ನಿ ಶ್ರೀಮತಿ ಪರಿಮಳರವರು ಗೃಹಿಣಿಯಾಗಿದ್ದಾರೆ. ಪುತ್ರ ಕಿರಣ್ ಎನ್.ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಕೀರ್ತಿಕಾರವರಿಗೆ ಪ್ರಶಾಂತ್ ರೊಂದಿಗೆ ವಿವಾಹವಾಗಿ ತಮಿಳುನಾಡಿನಲ್ಲಿ ನೆಲೆಸಿದ್ದಾರೆ.










