ಸುಬ್ರಹ್ಮಣ್ಯ ಎಸ್.ಎಸ್. ಪಿ.ಯು.ಕಾಲೇಜಿನ ಪ್ರೌಢಶಾಲಾ ಸಂಸ್ಕೃ ಶಿಕ್ಷಕ, ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಘು ಬಿಜೂರು ಜು. ೩೧ ರಂದು ಸೇವಾ ನಿವೃತ್ತಿ ಹೊಂದಿದರು.
ಇವರು ೧೯೮೯ ರಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಅಳಿಕೆ ಇಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿದರು . ೨೦೦೧ ರಿಂದ ೨೦೦೩ ರವರೆಗೆ-ಬೆಂಗಳೂರಿನ ಜ್ಞಾನಮಿತ್ರ; ಮತ್ತು ಜನಕ್ ವಿದ್ಯಾಲಯಗಳಲ್ಲಿ (ಆಂಗ್ಲಮಾಧ್ಯಮ) ಶಾಲೆಯಲ್ಲಿ ಸೇವೆ ಸಲ್ಲಿಸಿ, ೨೦೦೩ ರಿಂದ ಶ್ರೀ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಂಸ್ಕೃತ ಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಬ್ರಹ್ಮಣ್ಯ ದಲ್ಲಿ ೨೨ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತಿದ್ದಾರೆ.
ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಹಿಂದೂಸ್ಥಾನಿ ಸಂಗೀತಗಾರನಾಗಿ, ಸುಗಮ ಸಂಗೀತ ಭಜನೆಗಳ ಕಾಠ್ಯಕ್ರಮ ನೀಡಿದ ಅವರು ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ತಾಲೂಕು, ವಿಭಾಗೀಯ, ಜಿಲ್ಲಾ, ರಾಜ್ಯ ಮಟ್ಟದ ಹಲವು ಬಹುಮಾನಗಳಿಸಿಕೊಡುವಲ್ಲಿ ಯಶಸ್ವಿಯಾದವರು. ಸುಬ್ರಹ್ಮಣ್ಯ, ಕುಲ್ಕುಂದ, ಕಡಬ. ಸ್ಥಳೀಯವಾಗಿ ನೂರಾರು ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡುತಿದ್ದರು.









ಶಿಕ್ಷಣ ಇಲಾಖೆಯ ಸಾಂಸ್ಕೃತಿಕ ವಿಭಾಗದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ತೀರ್ಪಗಾರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಇಲಾಖೆ ಅಧ್ಯಾಪಕರಿಗಾಗಿ ನಡೆಸುತಿದ್ದ ಪಠ್ಯೇತರ ಚಟುವಟಿಕೆಗಳಲ್ಲಿ ತಾಲೂಕು, ಜಿಲ್ಲಾ ಮಟ್ಟದ ಪ್ರಥಮ ಬಹುಮಾನಗಳಿಸಿದ್ದಲ್ಲದೆ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿದ್ದರು.
ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ನಿರಂತರ ಇದುವರೆಗೆ ಶೇಕಡಾ ನೂರಕ್ಕೆ ನೂರು ಫಲಿತಾಂಶ ದಾಖಲಿಸುವಂತೆ ಮಾಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡವರು. ಪ್ರಸ್ತುತ ಕರ್ನಾಟಕ ಶಾಸ್ತ್ರೀಯ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ. ಹಲವಾರು ಪದ್ಯಗಳನ್ನು ರಚಿಸಿರುವ ಇವರು ಖ್ಯಾತ ಕವಿಗಳ ರಚನೆಗೆ ರಾಗ ಸಂಯೋಜನೆ ಮಾಡಿದ್ದರು. ೨೦೧೮ ರಲ್ಲಿ ಸುಬ್ರಹ್ಮಣ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಮಾತೃಶ್ರೀ ಕವನ ಸಂಕಲನ ಬಿಡುಗಡೆಗೊಂಡಿತ್ತು. ಅನೇಕ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುವ. ಇವರಿಗೆ ಕರ್ನಾಟಕ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು.
ಇವರ ಪತ್ನಿ ಸುಮಾತ್ರಾ ಗೃಹಿಣಿ, ಪುತ್ರ ಸಾಯಿ ವಿರಾಟ್ ಕುಂದಾಪುರ ವಿಶ್ವ ವಿನಾಯಕ ಇಂಡಿಯನ್ ಸಿ.ಬಿ.ಎಸ್.ಸಿ ಸ್ಕೂಲ್ ನ ನಾಲ್ಕನೇ ತರಗತಿ ವಿದ್ಯಾರ್ಥಿ.
ಇವರು ಮೂಲತಹ ಬೈಂದೂರು ಮೊಗೇರಿ ಕೆರ್ಗಾಲು ಗ್ರಾಮದವರು. ಪ್ರಸ್ತುತ ಸುಬ್ರಹ್ಮಣ್ಯ ನಿವಾಸಿ.










