ಕುಶಾಲನಗರದಲ್ಲಿ ಅಪಘಾತ : ಮೃತಪಟ್ಟವರು ಪೆರುವಾಜೆ ಅರ್ನಾಡಿಯ ಕಾರ್ತಿಕ್ ಭಟ್

0

ಕೊಡಗು ಜಿಲ್ಲೆಯ ಕುಶಾಲನಗರ ಆನೆಕಾಡು ಫಾರೆಸ್ಟ್ ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರು ಪೆರುವಾಜೆಯ ವಿಷ್ಣು ಭಟ್ ಅರ್ನಾಡಿಯವರ ಪುತ್ರ ಕಾರ್ತಿಕ್ ಭಟ್ ಎಂದು ಗೊತ್ತಾಗಿದೆ.

ಕುಶಾಲನಗರ ಆನೆಕಾಡು ಫಾರೆಸ್ಟ್ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿತ್ತು.

ಮಡಿಕೇರಿ ಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿಹೊಡೆದಿದೆ ಎಂದು ಹೇಳಲಾಗುತ್ತಿದೆ.
ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಾರ್ತಿಕ್ ಮೈಸೂರಿನಲ್ಲಿ ಇನ್ಪೋಸೆಸ್ ಉದ್ಯೋಗಿಯಾಗಿದ್ದರು.‌